ಮನೆ ಸ್ಥಳೀಯ ಲಿಂಗಾಂಬುದಿ ಕೆರೆಯ ಮೀನುಗಳ ಮರಣ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ಡಾ. ಕೆ ವಿ ರಾಜೇಂದ್ರ

ಲಿಂಗಾಂಬುದಿ ಕೆರೆಯ ಮೀನುಗಳ ಮರಣ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು:  ನಗರದ ಲಿಂಗಾಂಬುದಿ ಕೆರೆಯಲ್ಲಿರುವ ಮೀನುಗಳ ಮರಣ ತಡೆಗಟ್ಟುವ ಕುರಿತು ಮೀನುಗಾರಿಕೆ ಇಲಾಖೆಯವರು ಇಲಾಖೆಯಲ್ಲಿರುವ ತಜ್ಞರು ಅಥವಾ ಇತರೆ ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಿ ನಿರ್ವಹಣೆ ಕುರಿತು ಯೋಜನೆ ರೂಪಿಸಿ ಮೀನುಗಳ ಮರಣ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ.. ಕೆ ವಿ ರಾಜೇಂದ್ರ ಅವರು ಸೂಚಿಸಿದರು.

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಲಿಂಗಾಂಬುದಿ ಕೆರೆಯಲ್ಲಿ ಸಾಮೂಹಿಕವಾಗಿ ಮೀನುಗಳು ಮರಣ ಹೊಂದಿರುವುದರ ಸಂಬಂಧಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೀನುಗಳಿಗೆ ಅನುಕೂಲಕರ ವಾತವರಣ ಸೃಷ್ಟಿಸುವ ನಿಟ್ಟಿನಲ್ಲಿ ಅನುವಾಗುವ ಜಲ ಸಸ್ಯಗಳನ್ನು ಕೆರೆಯಲ್ಲಿ ಬೆಳೆಸಲು ಕ್ರಮಕೈಗೊಳ್ಳಲು ತಿಳಿಸಿದರು. ಕೆರೆಯಲ್ಲಿರುವ ಮೀನುಗಳ ನೈಸರ್ಗಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಡಿ-ಸ್ಟಾಕಿಂಗ್ ಕ್ರಮವಹಿಸಲು ಸೂಚಿಸಿದರು. ಕೆರೆಗೆ ಸಂಪರ್ಕವಿರುವ ಮಳೆ ನೀರು ಚರಂಡಿಗಳಲ್ಲಿ ತಕ್ಷಣವೇ  Litter Trap  ಗಳನ್ನು ಅಳವಡಿಸಲು ಸೂಚಿಸಿದರು.

ಕೆರೆಯ ಸುತ್ತಮುತ್ತಲು ಇರುವ ಪ್ರಾಧಿಕಾರದ ಬಡಾವಣೆಗಳಲ್ಲಿ ಎಸ್.ಟಿ.ಪಿ ಗಳು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದರ ಬಗ್ಗೆ ಮತ್ತು ರಾಜಕಾಲುವೆಯನ್ನು ಡಿ-ಸಿಲ್ಟಿಂಗ್ ಮತ್ತು ಕ್ಲೀನಿಂಗ್ ಕುರಿತು ಮೈಸೂರು ನಗರಾಭಿವೃಧ್ದಿ ಪ್ರಾಧಿಕಾರದವರು ಕ್ರಿಯಾ ಯೋಜನೆ ತಯಾರಿಸಿ ಕ್ರಮಕೈಗೊಳ್ಳಲು ಸೂಚಿಸಿದರು.

ಮೀನುಗಳು ಮರಣ ಹೊಂದಿರುವ ಬಗೆ ಉಪ ಅರಣ್ಯ ಸಂರಕ್ಷಣಾಧಿಕಾರಿರವರು ಮಾತನಾಡಿ, ಕೆರೆಯ ಸುತ್ತಮುತ್ತಲು ಇರುವ ಬಡಾವಣೆಗಳ ಮೂಲಕ ಹಾದು ಬರುವ ರಾಜಕಾಲುವೆಯಿಂದ ಕುಲಷಿತ ನೀರು ಹರಿದು ಬಂದಿದ್ದು, ಕೆರೆ ನೀರಿನ ಉಷ್ಣತೆ ಹಾಗು ಆಮ್ಮಜನಕದಲ್ಲಿ ವ್ಯತ್ಯಾಸಗಳಿಂದಾಗಿ ಮೀನುಗಳು ಮರಣ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ವೈಜ್ಞಾನಿಕ ತನಿಖೆಗಾಗಿ ಸತ್ತ ಮೀನು ಮರಿಗಳನ್ನು ಮಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕರು, ಮಹಾನಗರ ಪಾಲಿಕೆಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ವಿಭಾಗದ. ಕಾರ್ಯಪಾಲಕ ಅಭಿಯಂತರರು, ಮೀನುಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.