ಮನೆ ದೇಶ ಅನುಚಿತ ವರ್ತನೆ: ಮೂವರು ಸಂಸದರ ಅಮಾನತು

ಅನುಚಿತ ವರ್ತನೆ: ಮೂವರು ಸಂಸದರ ಅಮಾನತು

0

ನವದೆಹಲಿ (New Delhi): ರಾಜ್ಯಸಭೆಯಲ್ಲಿ ಅನುಚಿತ ವರ್ತನೆ ತೋರಿದರೆಂದು ಮೂವರು ಸಂಸದರನ್ನು ಕಲಾಪದಿಂದ ಅಮಾನತುಗೊಳಿಸಲಾಗಿದೆ.

ಇಬ್ಬರು ಎಎಪಿಯ ಸದಸ್ಯರು ಮತ್ತು ಒಬ್ಬರು ಪಕ್ಷೇತರ ಸದಸ್ಯ ಸೇರಿ ಮೂವರು ಸಂಸದರನ್ನು ಉಪಸಭಾಪತಿ ಕಲಾಪದಿಂದ ಅಮಾನತುಗೊಳಿಸಿದ್ದಾರೆ.

ಸಭಾಪತಿ ಪೀಠದ ಎದುರು ಧಾವಿಸಿ ಘೋಷಣಾ ಫಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಎಎಪಿಯ ಸುಶಿಲ್‌ ಕುಮಾರ್‌ ಗುಪ್ತಾ, ಸಂದೀಪ್‌ ಕುಮಾರ್‌ ಪಾಠಕ್‌ ಹಾಗೂ ಅಜಿತ್‌ ಕುಮಾರ್‌ ಭುಯನ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ವಿ.ಮುರಳೀಧರನ್‌ ಅವರು ಈ ವಾರದ ಉಳಿದ ಅವಧಿಯ ಕಲಾಪದಿಂದ ಮೂವರು ಸದಸ್ಯರನ್ನು ಅಮಾನತುಗೊಳಿಸುವ ನಿಲುವಳಿ ಸೂಚನೆ ಮಂಡಿಸಿದರು. ಇದನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಉಪಸಭಾಪತಿ ಹರಿವಂಶ್‌ ಅವರು ಅಮಾನತುಗೊಳಿಸಲಾದ ಸದಸ್ಯರ ಹೆಸರು ಪ್ರಕಟಿಸಿದರು.

ವಿರೋಧ ಪಕ್ಷಗಳ ಕೆಲವು ಸದಸ್ಯರು ಮತ ವಿಭಜನೆಗಾಗಿ ಒತ್ತಾಯಿಸಿದಾಗ, ಉಪಸಭಾಪತಿ ಅವರು ಮತ ವಿಭಜನೆಗೆ ಅವಕಾಶ ನೀಡುವಂತೆ ಸದಸ್ಯರಿಗೆ ಸೂಚಿಸಿದರು. ಆದರೆ, ವಿರೋಧ ಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದರು. ಇದರಿಂದ ಸದನವನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಯಿತು.

ಅನುಚಿತ ವರ್ತನೆ ತೋರಿದ ಕಾರಣಕ್ಕೆ ಈವರೆಗೆ ರಾಜ್ಯಸಭೆಯ ಕಲಾಪದಿಂದ ವಿರೋಧ ಪಕ್ಷಗಳ 23 ಸದಸ್ಯರನ್ನು ಅಮಾನತುಪಡಿಸಿದಂತಾಗಿದೆ.

ಹಿಂದಿನ ಲೇಖನಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಸಾಂತ್ವಾನ ಹೇಳಿ 25 ಲಕ್ಷ ರೂ. ಪರಿಹಾರ ಚೆಕ್‌ ನೀಡಿದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಸುರತ್ಕಲ್‌ ನಲ್ಲಿ ಯುವಕನ ಬರ್ಬರ ಹತ್ಯೆ