ಬೆಂಗಳೂರು: ಹಳೆ ಉಂಡವಾಡಿ ಯೋಜನೆಯನ್ನು ಪ್ರಸ್ತುತ ಇರುವ 350 ಕೋಟಿಗೆ ಬದಲಾಗಿ ಮೂಲದಲ್ಲಿ ಯೋಜಿಸಿದಂತೆ 563 ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾದ ರಾಜುಗೌಡರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಮೈಸೂರು ನಗರಕ್ಕೆಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಯಲ್ಲಿ ಮತ್ತು ವ್ಯಾಪ್ತಿಯ ಹೊರಗೆ ಬರುವ 92 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಹಳೆ ಉಂಡವಾಡಿ ಯೋಜನೆಯನ್ನು ಪ್ರಸ್ತುತ ಇರುವ 350 ಕೋಟಿಗೆ ಬದಲಾಗಿ ಮೂಲದಲ್ಲಿ ಯೋಜಿಸಿದಂತೆ 563 ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾದ ರಾಜುಗೌಡರಿಗೆ ಸಂಸದ ಪ್ರತಾಪ್ ಸಿಂಹ ಇಂದು ಬೆಂಗಳೂರಿನಲ್ಲಿ ಭೇಟೆ ಮಾಡಿ ಮನವಿ ಮಾಡಿಕೊಂಡರು.
ಮಂಡಳಿಯ ಮುಂದಿನ ಸಭೆಯಲ್ಲೇ ಅನುಮೋದನೆ ಕೊಡುವುದಾಗಿ ಅಧ್ಯಕ್ಷರು ಭರವಸೆ ಕೊಟ್ಟಿದ್ದಾರೆ. ಎಬ ಮಾಹಿತಿ ತಿಳಿದುಬಂದಿದೆ.














