ಮನೆ ಸುದ್ದಿ ಜಾಲ ಕೊರೊನಾ ಹೆಚ್ಚಳ: ಗಾಯಿತ್ರಿ ಥಿಯೇಟರ್ ತಾತ್ಕಾಲಿಕ ಸ್ಥಗಿತ

ಕೊರೊನಾ ಹೆಚ್ಚಳ: ಗಾಯಿತ್ರಿ ಥಿಯೇಟರ್ ತಾತ್ಕಾಲಿಕ ಸ್ಥಗಿತ

0

ಮೈಸೂರು: ಮೈಸೂರು ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲಯಲ್ಲಿ ಮೈಸೂರಿನ ಗಾಯಿತ್ರಿ ಚಿತ್ರಮಂದಿರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕರ್ಫ್ಯೂ ಆದೇಶದಿಂದ ಮಾಲೀಕರು  ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ. ಸರ್ಕಾರದ ನಿಯಮಗಳಂತೆ ಶೇ.50ರಷ್ಟು ಆಸನದ ವ್ಯವಸ್ಥೆ ಮಾಡಬೇಕಿತ್ತು. ಆದ್ರೆ ಗಾಯತ್ರಿ ಥಿಯೇಟರ್​ನಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರ ಪ್ರದರ್ಶನ ಮಾಡದಿರಲು ಮಾಲೀಕರು ನಿರ್ಧರಿಸಿದ್ದಾರೆ.

ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಹಳಷ್ಟು ಹಳೆಯದಾದ ಗಾಯತ್ರಿ ಚಿತ್ರಮಂದಿರ ಕಳೆದ ವರ್ಷ ಕೊರೊನಾ ಸಂಕಷ್ಟಕ್ಕೆ ತುತ್ತಾಗಿತ್ತು. ನಗರದ ಶಾಂತಲಾ, ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳು ಮುಚ್ಚಿದ್ದವು‌.ಇದೀಗ ಗಾಯತ್ರಿ ಚಿತ್ರ ಮಂದಿರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗಾಯತ್ರಿ ಥಿಯೇಟರ್ ಮಾಲೀಕ ರಾಜರಾಮ್ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನ563 ಕೋಟಿ ವೆಚ್ಚದಲ್ಲಿ ಹಳೆ ಉಂಡವಾಡಿ ಯೋಜನೆ ಕೈಗೆತ್ತಿಕೊಳ್ಳುವಂತೆ ರಾಜುಗೌಡರಿಗೆ ಪ್ರತಾಪ್ ಸಿಂಹ ಮನವಿ
ಮುಂದಿನ ಲೇಖನಮದುವೆಯಾಗಿ ಮಕ್ಕಳಿದ್ದ ಪ್ರಿಯತಮೆಯೊಂದಿಗೆ ಸಂಬಂಧ: ಯುವಕನಿಗೆ ಧರ್ಮದೇಟು