ಮನೆ ರಾಷ್ಟ್ರೀಯ ತಮಿಳುನಾಡು: ನಾಗಪಟ್ಟಣಂ ಸಂಸದ ಎಂ. ಸೆಲ್ವರಾಜ್ ನಿಧನ

ತಮಿಳುನಾಡು: ನಾಗಪಟ್ಟಣಂ ಸಂಸದ ಎಂ. ಸೆಲ್ವರಾಜ್ ನಿಧನ

0

ಚೆನ್ನೈ: ಡೆಲ್ಟಾ ರೈತರನ್ನು ಬೆಂಬಲಿಸಿ ಹಲವಾರು ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ನಾಗಪಟ್ಟಿಣಂ ಸಂಸದ ಹಾಗೂ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಐ) ಹಿರಿಯ ನಾಯಕ ಎಂ. ಸೆಲ್ವರಾಜ್ ಅವರು ವಯೋಸಹಜ ಕಾಯಿಲೆಯಿಂದ  ಸೋಮವಾರ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Join Our Whatsapp Group

 67 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಕಮಲಾವತನಂ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸೆಲ್ವರಸು ಎಂದೇ ಜನಪ್ರಿಯವಾಗಿದ್ದ ಸಿಪಿಐ ನಾಯಕ ಸೆಲ್ವರಾಜ್ 1957ರಲ್ಲಿ ತಿರುವರೂರು ಜಿಲ್ಲೆಯಲ್ಲಿ ಜನಿಸಿದ್ದರು.  ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ನಸುಕಿನ ಜಾವ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ನಾಲ್ಕು ಬಾರಿ ಸಂಸದರಾಗಿದ್ದ ಇವರು 1989ರ ಲೋಕಸಭೆ ಚುನಾವಣೆಯಲ್ಲಿ ನಾಗಪಟ್ಟಿಣಂ ಕ್ಷೇತ್ರದಿಂದ ಗೆದ್ದು ಛಾಪು ಮೂಡಿಸಿದ್ದರು. ಬಳಿಕ 1996, 1998 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಗಳಿಸಿದ್ದರು.

ಇವರ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಸೆಲ್ವರಾಜ್ ಅವರ ನಿಧನ ಸಿಪಿಐಗೆ ಮತ್ತು ಡೆಲ್ಟಾ (ಕಾವೇರಿ ನದಿ ಕಣಿವೆ) ಜಿಲ್ಲೆಗಳ ಜನತೆಗೆ ತುಂಬಲಾರದ ನಷ್ಟ ಎಂದಿದ್ದಾರೆ.

ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತರಸನ್ ಕೂಡ  ಸಂತಾಪ ಸೂಚಿಸಿದ್ದಾರೆ.