ಮನೆ ಮನರಂಜನೆ ನಟ ಪ್ರಭುದೇವ ಅಭಿನಯದ “ವುಲ್ಫ್’ ಸಿನಿಮಾದ ಟೀಸರ್ ಬಿಡುಗಡೆ

ನಟ ಪ್ರಭುದೇವ ಅಭಿನಯದ “ವುಲ್ಫ್’ ಸಿನಿಮಾದ ಟೀಸರ್ ಬಿಡುಗಡೆ

0

ಬಹುಭಾಷಾ ನಟ ಪ್ರಭುದೇವ ಅಭಿನಯದ “ವುಲ್ಫ್’ ಸಿನಿಮಾದ ಮೊದಲ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿ ಹೊರಗೆ ಬಂದಿದೆ. “ಸಂದೇಶ್‌ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ವುಲ್ಫ್’ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ.

 “ವುಲ್ಫ್’ ಸಿನಿಮಾದಲ್ಲಿ ಪ್ರಭುದೇವ ಅವರೊಂದಿಗೆ ವಸಿಷ್ಠ ಸಿಂಹ, ಅನುಸೂಯ ಭಾರದ್ವಾಜ್‌, ಲಕ್ಷ್ಮೀ ರೈ, ಅಂಜು ಕುರಿಯನ್‌ ಮುಂತಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ “ವುಲ್ಫ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಸಿನಿಮಾದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ.

ಇದೇ ವೇಳೆ ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಮೊದಲ ಹಂತದಲ್ಲಿ “ವುಲ್ಫ್’ ಸಿನಿಮಾದ ಮೊದಲ ಟೀಸರ್‌ ಅನ್ನು ಬಿಡುಗಡೆಗೊಳಿಸಿದೆ.

ಇನ್ನು ಇದೇ ಮೊದಲ ಬಾರಿಗೆ ತಮಿಳು ನಟ ವಿಜಯ್‌ ಸೇತುಪತಿ “ವುಲ್ಫ್’ ಸಿನಿಮಾದ ಗೀತೆಯೊಂದಕ್ಕೆ ಧ್ವನಿಯಾಗಿದ್ದು, ಈ ಗೀತೆಯನ್ನು ಇದೇ ತಿಂಗಳು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

 “ವುಲ್ಫ್’ ಸಿನಿಮಾಕ್ಕೆ ವಿನು ವೆಂಕಟೇಶ್‌ ನಿರ್ದೇಶನವಿದ್ದು, ಅರುಳ್‌ ವಿನ್ಸೆಂಟ್‌ ಛಾಯಾಗ್ರಹಣವಿದೆ. ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್‌ “ವುಲ್ಫ್’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, ಇದೇ ಸೆಪ್ಟೆಂಬರ್‌ ವೇಳೆಗೆ “ವುಲ್ಫ್’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಿಂದಿನ ಲೇಖನಮೈಸೂರು ಅರಮನೆ ಹೊರಾಂಗಣದಲ್ಲಿ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ
ಮುಂದಿನ ಲೇಖನಪಕ್ಷ ಸಂಘಟನೆಗಾಗಿ ಅ.15ರ ನಂತರ ಜೆಡಿಎಸ್ ನಾಯಕರ ರಾಜ್ಯ ಪ್ರವಾಸ