ಮನೆ ಸುದ್ದಿ ಜಾಲ ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ ಭಾರತೀಯ ಸೇನಾಪಡೆ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ ಭಾರತೀಯ ಸೇನಾಪಡೆ

0

ಜಲಾಲಾಬಾದ್ (Jalalabad)- ಜಮ್ಮು ಮತ್ತು ಕಾಶ್ಮೀರದ ಜಲಾಲಾಬಾದ್ ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ತೀವ್ರ ಅಪಾಯಕ್ಕೆ ಸಿಲುಕಿದ್ದ ಕುಟುಂಬವನ್ನು ಭಾರತೀಯ ಸೇನೆ ರಕ್ಷಿಸಿದೆ.
ನಾವು ಮತ್ತೆ ಒಬ್ಬರನ್ನೊಬ್ಬರು ನೋಡುವುದಿಲ್ಲ ಎಂದು ನಾವು ಭಾವಿಸಿದ್ದೇವು. ನಾವು ಇರುವ ಸ್ಥಳದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಗ್ರೆನೇಡ್ ಸ್ಫೋಟಗಳು ಸಂಭವಿಸಿತ್ತು. ನಾವು ಜೀವಂತವಾಗಿ ಉಳಿಯುವುದಿಲ್ಲ ಎಂದು ಭಾವಿಸಿದ್ದೇವು. ಆದರೆ ಸೇನೆ ಸಕಾಲದಲ್ಲಿ ಸ್ಪಂದಿಸಿ ನಮ್ಮನ್ನು ರಕ್ಷಿಸಿತು ಎಂದು ಅಲ್ಲಿನ ನಿವಾಸಿ 34 ವರ್ಷದ ಜುಲ್ಫಿಕರ್ ಅಲಿ ಅವರು ಹೇಳಿದ್ದಾರೆ.
ನಮ್ಮ ಮನೆಯ ಹೊರಗೆ ಗುಂಡಿನ ದಾಳಿ ನಡೆಯುತ್ತಿತ್ತು. ಗೋಡೆಗಳಿಗೆ ಮತ್ತು ಹೊರಗಿಂದ ವಾಹನಗಳ ಮೇಲೆ ಉಗ್ರರು ಗುಂಡು ಹಾರಿಸುತ್ತಿದ್ದಾಗ ನಮ್ಮ ಕುಟುಂಬ ಮನೆಯ ಒಂದು ಮೂಲೆಯಲ್ಲಿ ಅಡಗಿಕೊಂಡಿತ್ತು. ಈ ಭಯಾನಕ ಪರಿಸ್ಥಿತಿಯ ನಡುವೆಯೇ ಸೇನೆಯ ತಂಡವೊಂದು ಮನೆಯೊಳಗೆ ಪ್ರವೇಶಿಸಿತು ಮತ್ತು ಭಾರೀ ಕಾರ್ಯಾಚರಣೆ ನಡೆಸಿ ಪ್ರತಿಯೊಬ್ಬರನ್ನು ರಕ್ಷಿಸಿತು.
ಸೇನೆ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ ಮತ್ತು ನಾವು ಇಂದು ಜೀವಂತವಾಗಿದ್ದೇವೆ” ಎಂದು ಅಲಿ ಹೇಳಿದ್ದಾರೆ.
ಜನನಿಬಿಡ ಜಲಾಲಾಬಾದ್ ಪ್ರದೇಶದಲ್ಲಿ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಕಾಳಗದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಕೋವಿಡ್ ಹೆಚ್ಚಳ: ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು ಸರ್ಕಾರ
ಮುಂದಿನ ಲೇಖನಪ್ರಧಾನಿ ಮೋದಿ ಜಮ್ಮು-ಕಾಶ್ಮೀರ ಭೇಟಿ ವೇಳೆ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಚು ?