ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇದ್ದ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯನ್ನು ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತಾತ್ಕಾಲಿವಾಗಿ ಮುಂದೂಡಲಾಗಿದೆ.
ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 16 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಹೈದ್ರಾಬಾದ್ ಕರ್ನಾಟಕ 371 (ಜೆ) ಗೆ ಮೀಸಲಿರಿಸಿದ ಸಹ ಪ್ರಾಧ್ಯಾಪಕ ಶಿಕ್ಷಣ ಶಾಸ್ತ್ರ, ಭೌತ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ವಿಷಯಗಳಿಗೆ ಅರ್ಹ ಅಭ್ಯರ್ಥಿ ಆಯ್ಕೆ ಸಂಬಂಧ ಸೆ. 18 ರಂದು ಸಂದರ್ಶನ ಏರ್ಪಡಿಸಲಾಗಿತ್ತು.
ಆದರೆ ಉಚ್ಛ ನ್ಯಾಯಾಲಯದ W.P No-4972/2024 ಸೆಪ್ಡಂಬರ್ 17ರ ಮಧ್ಯಂತರ ಆದೇಶದನ್ವಯ ಸಹ ಪ್ರಾಧ್ಯಾಪಕ ಶಿಕ್ಷಣಶಾಸ್ತ್ರ, ಭೌತ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ವಿಷಯಗಳ ಸಂದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಂದರ್ಶನದ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕರಾಮುವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.