ಮನೆ ಅಪರಾಧ ಟ್ರಕ್ – ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಟ್ರಕ್ – ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

0

ಬೀದರ್: ಟ್ರಕ್ ಹಾಗೂ ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದಿದೆ.

ಘಟನೆಯಲ್ಲಿ  ಐವರಿಗೆ ಗಾಯಗಳಾಗಿದ್ದು ಬೀದರ್ ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟಿರುವ ಎಲ್ಲರೂ ಮಹಾರಾಷ್ಟ್ರದ ಉಗ್ಗಿರ್ ಮೂಲದವರು ಎಂದು ತಿಳಿದು ಬಂದಿದೆ.

ಟಾಟಾ ಎಸ್ ವಾಹನದಲ್ಲಿ ಒಟ್ಟು 14 ಜನ ಉಗ್ಗಿರ್ ನಿಂದಾ ಹೈದ್ರಾಬಾದ್ ಹೋಗುತ್ತಿದ್ದರು. 6 ಜನ ಮಹಿಳೆಯರು 5 ಜನ ಪುರುಷರು 3 ಮಕ್ಕಳು ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ರಕ್-ಟಾಟಾ ಎಸಿ ನಡುವೆ ಡಿಕ್ಕಿಯಾಗಿದ್ದು, ದಸ್ತಗಿರ್ ದಾವಲಸಾಬ್ (36) ರಸೀದಾ ಶೇಕ್ (41) ಟಾಟಾ ಎಸಿ ಚಾಲಕ ವಲಿ (31) ಅಮಾಮ್ ಶೇಕ್ (51) ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ದನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಹಿಂದಿನ ಲೇಖನರಾಷ್ಟ್ರೀಯ ನಿರ್ಮಾಣ ನಿಗಮದಲ್ಲಿ NBCC ನೇಮಕಾತಿ ಪ್ರಕಟಣೆ  
ಮುಂದಿನ ಲೇಖನಪಕ್ಷದ ಸಮಸ್ಯೆಯೇಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಡಿಕೆಶಿಗೆ ಆರ್ ಅಶೋಕ್ ಟಾಂಗ್