ಶ್ರೀನಗರ(Shrinagar): ಗ್ರೆನೇಡ್ ಎಸೆದು ಉಗ್ರರು ಪರಾರಿಯಾಗಿರುವ ಘಟನೆ ಬುಧವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಶೋಪಿಯಾನ್ ಜಿಲ್ಲೆಯ ಕುತ್ಪೋರ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಈ ಸಂದರ್ಭದಲ್ಲಿ ಗ್ರೆನೇಡ್ ದಾಳಿ ನಡೆಸಿದ ಉಗ್ರರು ರಾತ್ರಿ ಕತ್ತಲೆಯ ಮರೆಯಲ್ಲಿ ಪರಾರಿಯಾದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆದರೂ ಉಗ್ರರ ಅಡಗುತಾಣವನ್ನು ನಾಶಗೊಳಿಸಿರುವ ಭದ್ರತಾ ಪಡೆ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.