ಮನೆ ರಾಷ್ಟ್ರೀಯ ಗ್ರೆನೇಡ್ ಎಸೆದು ಉಗ್ರರು ಪರಾರಿ: ಉಗ್ರರ ಅಡಗು ತಾಣ ನಾಶಗೊಳಿಸಿದ ಭದ್ರತಾ ಪಡೆ

ಗ್ರೆನೇಡ್ ಎಸೆದು ಉಗ್ರರು ಪರಾರಿ: ಉಗ್ರರ ಅಡಗು ತಾಣ ನಾಶಗೊಳಿಸಿದ ಭದ್ರತಾ ಪಡೆ

0

ಶ್ರೀನಗರ(Shrinagar): ಗ್ರೆನೇಡ್ ಎಸೆದು ಉಗ್ರರು ಪರಾರಿಯಾಗಿರುವ ಘಟನೆ ಬುಧವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಶೋಪಿಯಾನ್ ಜಿಲ್ಲೆಯ ಕುತ್ಪೋರ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಈ ಸಂದರ್ಭದಲ್ಲಿ ಗ್ರೆನೇಡ್‌ ದಾಳಿ ನಡೆಸಿದ ಉಗ್ರರು ರಾತ್ರಿ ಕತ್ತಲೆಯ ಮರೆಯಲ್ಲಿ ಪರಾರಿಯಾದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಆದರೂ ಉಗ್ರರ ಅಡಗುತಾಣವನ್ನು ನಾಶಗೊಳಿಸಿರುವ ಭದ್ರತಾ ಪಡೆ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಹಿಂದಿನ ಲೇಖನವಾಟ್ಸ್ಆ್ಯಪ್ ನಲ್ಲಿ ಬರಲಿದೆ ಅವತಾರ್ ಫೀಚರ್
ಮುಂದಿನ ಲೇಖನಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಂದ ಪತಿ