ಮನೆ ಸುದ್ದಿ ಜಾಲ ಪಠ್ಯ ಪುಸ್ತಕ ವಿವಾದ ಮುಗಿದ ಅಧ್ಯಾಯ, ಮಕ್ಕಳು ನೈಜ್ಯ ಇತಿಹಾಸ ಕಲಿಯಲಿದ್ದಾರೆ: ಪ್ರಹ್ಲಾದ್‌ ಜೋಶಿ

ಪಠ್ಯ ಪುಸ್ತಕ ವಿವಾದ ಮುಗಿದ ಅಧ್ಯಾಯ, ಮಕ್ಕಳು ನೈಜ್ಯ ಇತಿಹಾಸ ಕಲಿಯಲಿದ್ದಾರೆ: ಪ್ರಹ್ಲಾದ್‌ ಜೋಶಿ

0

ಮೈಸೂರು (Mysuru)- ಪಠ್ಯ ಪುಸ್ತಕ ವಿವಾದ ಈಗ ಮುಗಿದ ಅಧ್ಯಾಯ. ಮಕ್ಕಳು ಇನ್ಮುಂದೆ ನೈಜ್ಯ ಇತಿಹಾಸ ಕಲಿಯಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ಎಡಪಂಥೀಯ ಇತಿಹಾಸ ಬೋದಿಸಲಾಗುತ್ತಿತ್ತು. ಆದರೆ ಈಗ ದೇಶದ ನೈಜ್ಯ ಇತಿಹಾಸವನ್ನ ಪಠ್ಯದ ಮೂಲಕ ಹೇಳಲಾಗುತ್ತಿದೆ. ಮಕ್ಕಳು ಇನ್ಮುಂದೆ ನೈಜ್ಯ ಇತಿಹಾಸ ಕಲಿಯಲಿದ್ದಾರೆ ಎಂದರು.

ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲಾ. ಮುಂದಿನ ದಿ‌ನಗಳ ದೃಷ್ಟಿಯಿಂದಲೂ ಕಲ್ಲಿದ್ದಲೂ ಸಂಗ್ರಹ ಮಾಡಿಕೊಳ್ಳುತ್ತಿದ್ದೇವೆ. ಯಾವ ಸಮಸ್ಯೆ ಉದ್ಬವವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಮೈಸೂರಿಗೆ ಜೂನ್ 21ರಂದು ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. ಅರಮನೆ ಮುಂಭಾಗ ಮೋದಿ ಅವರ ಯೋಗ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಆಗಮನ ಮೈಸೂರಿಗೆ ಮಾತ್ರ ಅಲ್ಲಾ ಇಡೀ ರಾಜ್ಯಕ್ಕೆ ಸಂತಸ ಮತ್ತು ಹೆಮ್ಮೆ ತರುತ್ತಿದೆ. ಅವತ್ತು ಒಂದು ದಿನ ಮಾತ್ರ ಮೋದಿ ಅವರ ಜೊತೆ ಯೋಗ ಮಾಡುವುದಲ್ಲ. ಅಂದಿನಿಂದ ಪ್ರತಿದಿನ ಎಲ್ಲರೂ ಯೋಗ ಮಾಡುವುದಕ್ಕೆ ಪ್ರಾರಂಭಿಸಬೇಕು. ಮೋದಿ ಅವರ ಆಗಮನ ಯೋಗ ಆರಂಭಿಸಲು ಎಲ್ಲರಿಗೂ ಪ್ರೇರಪಣೆಯಾಗಲಿ ಎಂದು ಹೇಳಿದರು.

ಹಿಂದಿನ ಲೇಖನಯುಪಿಎಸ್‌ಸಿ ಪರೀಕ್ಷೆ: ಅಂಧತ್ವದ ನಡುವೆಯೇ 425ನೇ ರ‍್ಯಾಂಕ್‌ ಪಡೆದ ಪಿರಿಯಾಪಟ್ಟಣದ ಕೆ.ಟಿ.ಮೇಘನಾ
ಮುಂದಿನ ಲೇಖನಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಸಿದ್ಧತೆ ಬಗ್ಗೆ ಸಿಎಂ ಬೊಮ್ಮಾಯಿ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮೋದಿ