ಮನೆ ಸುದ್ದಿ ಜಾಲ ವಿಕ್ಟೊರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಸಿದ್ಧತೆ ಪರಿಶೀಲನೆ

ವಿಕ್ಟೊರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಸಿದ್ಧತೆ ಪರಿಶೀಲನೆ

0

ಬೆಂಗಳೂರು: ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ಶುಕ್ರವಾರ ಆರೋಗ್ಯ ಸಚಿವ ಕೆ.ಸುಧಾಕರ್ ಭೇಟಿ ನೀಡಿ ಕೋವಿಡ್–19 ಸೋಂಕಿತರ ಚಿಕಿತ್ಸೆಗೆ ಮಾಡಲಾಗಿರುವ ಸಿದ್ಧತೆ ಹಾಗೂ ಕೋವಿಡ್ ಲಸಿಕೆಯ ಮುನ್ನೆಚ್ಚರಿಕಾ ಡೋಸ್ ವಿತರಣೆಯ ಪ್ರಗತಿಯನ್ನು ಪರಿಶೀಲಿಸಿದರು.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ವಿಕ್ಟೊರಿಯಾ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಲಸಿಕೆಯ ಮುಂಜಾಗ್ರತಾ ಡೋಸ್ ವಿತರಣೆಯ ಪ್ರಗತಿ ಹಾಗೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಲಾಯಿತು ಎಂದು ತಿಳಿಸಿದ್ದಾರೆ.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪಿಎಂಎಸ್ಎಸ್‌ವೈ ಆಸ್ಪತ್ರೆಗೆ ಭೇಟಿ ನೀಡಿ ಮುಂಜಾಗ್ರತಾ ಡೋಸ್ ಪಡೆದುಕೊಂಡರು ಎಂದೂ ಸುಧಾಕರ್ ತಿಳಿಸಿದ್ದಾರೆ.

ಹಿಂದಿನ ಲೇಖನಸ್ವಾಮಿ ವಿವೇಕಾನಂದರ ಬದುಕಿನ ಪಥ ಯುವಜನರಿಗೆ ಬೆಳಕು: ಪದ್ಮಾವತಿ
ಮುಂದಿನ ಲೇಖನಆಸ್ತಿ ವಿಚಾರಕ್ಕೆ ಗಲಾಟೆ: ಮಹಿಳೆಯ ಹತ್ಯೆ, ನಾಲ್ವರು ಆರೋಪಿಗಳ ಬಂಧನ