ಮನೆ ಅಪರಾಧ ಟಿಟಿಇ ಸೋಗಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ 

ಟಿಟಿಇ ಸೋಗಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ 

0

ಬೆಂಗಳೂರುಯಶ್ವಂತ್ ಪುರ- ಗೋರಖ್ ಪುರ ಎಕ್ಸ್ ಪ್ರೆಸ್ ನಲ್ಲಿ ಈತ ಟಿಕೆಟ್ ಪರಿಶೀಲನೆ ಮಾಡುವ ಟಿಟಿಇ ಸೋಗಿನಲ್ಲಿ  ಜನರಿಗೆ ಮೋಸ ಮಾಡುತ್ತಿದ್ದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ 23 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಭೋಪಾಲ್ ಮೂಲದ ಈತ ತನ್ನನ್ನು ಪ್ರೇಮ್ ಕುಮಾರ್ ಎಂದು ಗುರುತಿಸಿಕೊಂಡಿದ್ದ ಹಾಗೂ ಟಿಟಿಇ ಸೋಗಿನಲ್ಲಿ ಮೋಸದಿಂದ ಪಡೆದ ಹಣವನ್ನು ಬೆಂಗಳೂರಿನಲ್ಲಿರುವ ತನ್ನ ಗೆಳತಿಗಾಗಿ ಖರ್ಚು ಮಾಡುತ್ತಿದ್ದ.
ಹಿಂದೂಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಈ ವ್ಯಕ್ತಿಯನ್ನು ಬಂಧಿಸಿದ್ದು, ಐಪಿಸಿಯ 7 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆತನಿಂದ ಮೂರು ಲ್ಯಾಪ್ ಟಾಪ್ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ.

ರೈಲ್ವೆ ಮೂಲಗಳ ಪ್ರಕಾರ ಪ್ರಯಾಣಿಕರು ಕೆಲವು ವಾರಗಳಿಂದ ವ್ಯಕ್ತಿಗಳು ಟಿಟಿಇ ಸಮವಸ್ತ್ರ ಅಥವಾ ಐಆರ್ ಸಿಟಿಸಿಯ ಟಿ-ಶರ್ಟ್ ಗಳನ್ನು ಧರಿಸಿ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರ್ ಪಿಎಫ್ ರೈಲ್ವೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ರೈಲ್ವೆ ಸಿಬ್ಬಂದಿಯ ಸೋಗು ಹಾಕುವ, ಅನುಮಾನಾಸ್ಪದ ನಡೆಯನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ನಿಗಾ ಇಡುವಂತೆ ಸೂಚಿಸಿತ್ತು.

ಬೆಂಗಳೂರು ವಿಭಾಗದ ಟಿಟಿಇಗಳ ಪೈಕಿ ಒಬ್ಬರು ಪ್ರೇಮ್ ಕುಮಾರ್ ನ್ನು ಪ್ರಶ್ನಿಸಿದಾಗ ಆತ ಅನುಮಾನಾಸ್ಪದ ವರ್ತನೆ ತೋರಿದ ಅಷ್ಟೇ ಅಲ್ಲದೇ ತಾನು ಸಿಕಂದರಾಬಾದ್ ರೈಲ್ವೆ ವಿಭಾಗಕ್ಕೆ ಸೇರಿದ ಅಧಿಕಾರಿ ಎಂದು ಹೇಳತೊಡಗಿದ. ಈ ಬಗ್ಗೆ ಆರ್ ಪಿಎಫ್ ಗೆ ಮಾಹಿತಿ ನೀಡಲಾಗಿತ್ತು. ಹಿಂದೂಪುರ ರೈಲ್ವೆ ಸ್ಟೇಷನ್ ಬಳಿ ಅಧಿಕಾರಿಗಳು ಆತನ ವಿಚಾರಣೆ ನಡೆಸಿದಾಗ ತನ್ನ ಬಳಿ ಇದ್ದ ದಾಖಲೆಗಳನ್ನು ಮರೆತುಬಂದಿರುವುದಾಗಿ ಹೇಳಿದ. ತನ್ನ ಬಳಿ ಇದ್ದ ಮೂರು ಲ್ಯಾಪ್ ಟಾಪ್ ಗಳನ್ನು ತೆರೆಯುವಂತೆ ಹೇಳಿದಾಗ ಅದನ್ನು ತೆರೆಯುವುದಕ್ಕೆ ಸಾಧ್ಯವಾಗಲಿಲ್ಲ. ಸಿಕಂದರಾಬಾದ್ ನ ವಿಭಾಗವನ್ನು ಸಂಪರ್ಕಿಸಿದಾಗ ಈ ಹೆಸರಿನ ವ್ಯಕ್ತಿಗಳು ಯಾರೂ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಯಿತು. ಕೊನೆಗೂ ಟಿಟಿಇ ಸೋಗಿನಲ್ಲಿದ್ದ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡ. ಒಮ್ಮೆ ಪ್ರಯಾಣಿಕರಿಂದ 65,000 ರೂಪಾಯಿ ದಂಡ ವಸೂಲಿ ಮಾಡಿರುವುದಾಗಿಯೂ ಹೇಳಿದ್ದ. ಆ ಹಣವನ್ನು ತನ್ನ ಗೆಳತಿಗಾಗಿ ಖರ್ಚು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.