ಬೆಂಗಳೂರು(Bengaluru): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸದ್ಯದಲ್ಲೇ ಮೂಹೂರ್ತ ನಿಗದಿಯಾಗಲಿದ್ದು, ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಮುಂದಿನ ಎರಡು ವಾರದಲ್ಲಿ ಅಧಿಸೂಚನೆ ಹೊರಡಿಸುವಂತೆ ಆದೇಶ ನೀಡಿದೆ.
ಮಧ್ಯಪ್ರದೇಶದ ಪಾಲಿಕೆ ಚುನಾವಣೆ ಸಂಭಂಸಿದಂತೆ ಅರ್ಜಿ ವಿಚಾರಣೆ ವೇಳೆ ಸುಪೀಂ ಕೊರ್ಟ್ ತ್ರಿಸದಸ್ಯ ಪೀಠ ಬಾಕಿ ಇರುವ ದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಹೀಗಾಗಿ ಹಾಲಿ ಇರುವ ಬಿಬಿಎಂಪಿ 198 ವಾರ್ಡ್‍ಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ನಾವು ಬಿಬಿಎಂಪಿ ಚುನಾವಣೆಗೆ ಸಿದ್ಧ ಎಲೆಕ್ಷನ್ ಗೆ ಸುಪ್ರೀಂಕೋರ್ಟ್ 2 ವಾರ ಸಮಯ ನೀಡಿದೆ. ಬಿಬಿಎಂಪಿ 198 ವಾರ್ಡ್ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಲಿದೆ.
ವಾರ್ಡ್ ಪುನರ್ ವಿಂಗಡಣೆ ಕಾರಣಕ್ಕೆ ಚುನಾವಣೆ ಮುಂದೂಡಿಕೆ ಸರಿಯಲ್ಲ. ಖಾಲಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಮೀಸಲಾತಿ ಗೊಂದಲದ ಬಗ್ಗೆ ಎಜಿ ಜೊತೆ ಚರ್ಚಿಸುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.