ಮನೆ ಕ್ರೀಡೆ ಮಹಿಳಾ ಏಕೈಕ ಟಿ20 ಪಂದ್ಯ: ಭಾರತದ ವಿರುದ್ಧ ನ್ಯೂಜಿಲೆಂಡ್ ಗೆ ಜಯ

ಮಹಿಳಾ ಏಕೈಕ ಟಿ20 ಪಂದ್ಯ: ಭಾರತದ ವಿರುದ್ಧ ನ್ಯೂಜಿಲೆಂಡ್ ಗೆ ಜಯ

0

ನ್ಯೂಜಿಲೆಂಡ್ : ಕ್ವೀನ್ಸ್‌ಟೌನ್‌ನಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಮಹಿಳಾ ತಂಡ 18 ರನ್‌ಗಳಿಂದ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.  ಗೆಲುವಿಗೆ ನ್ಯೂಜಿಲೆಂಡ್ ನೀಡಿದ್ದ 156 ರನ್ ಗಳ ಗುರಿ ಬೆನ್ನಟ್ಟಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. 

ಭಾರತದ ಬ್ಯಾಟಿಂಗ್‌ನಲ್ಲಿ ಮೇಘನಾ 37 ರನ್ ಮತ್ತು ಯಾಸ್ತಿಕಾ ಭಾಟಿಯಾ 26 ರನ್ ಗಳಿಸಿದರು. ನ್ಯೂಜಿಲೆಂಡ್ ಬೌಲರ್‌ಗಳಾದ ಜೆಸ್ ಕೆರ್, ಅಮೆಲಿಯಾ ಕೆರ್ ಮತ್ತು ಜಾನ್ಸನ್ ಚೆರೋ ತಲಾ ಎರಡು ವಿಕೆಟ್ ಪಡೆದರು.

ನ್ಯೂಜಿಲೆಂಡ್ ಬ್ಯಾಟಿಂಗ್ ನಲ್ಲಿ ಸುಜಿ ಬೇಟ್ಸ್ (36) ಮತ್ತು ಡಿವೈನ್ (31) ರನ್‍ಗಳನ್ನ ಕಲೆಹಾಕಿ ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು.

ಈ ಪಂದ್ಯಕ್ಕೆ ಭಾರತ ತಂಡದ ಹಿರಿಯ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಪಂದ್ಯದಿಂದ ಹೊರಗುಳಿದಿದ್ದರು. ಮುಂದೆ ಭಾರತ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಶನಿವಾರ ನಡೆಯಲಿದೆ.