ಮನೆ ರಾಜಕೀಯ ದೇವಸ್ಥಾನಕ್ಕೆ ಘಂಟೆ, ಜಾಗಟೆ ಸದ್ದಿಗೆ ನೀಡಿದ್ದ ನೋಟಿಸ್ ವಾಪಸ್

ದೇವಸ್ಥಾನಕ್ಕೆ ಘಂಟೆ, ಜಾಗಟೆ ಸದ್ದಿಗೆ ನೀಡಿದ್ದ ನೋಟಿಸ್ ವಾಪಸ್

0

ಬೆಂಗಳೂರು: ದೇವಸ್ಥಾನಗಳಲ್ಲಿ ಜಾಗಟೆ, ಘಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ನೀಡಲಾಗಿದ್ದ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ದೇವಸ್ಥಾನದ ವಿಚಾರವಾಗಿ ದೊಡ್ಡ ಗಣತಿ ದೇವಸ್ಥಾನಕ್ಕೆ ನೀಡಿದ ನೋಟೀಸ್ ವಿಚಾರವನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಶಾಸಕ ರವಿಸುಬ್ರಹ್ಮಣ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಧಾರ್ಮಿಕ ದತ್ತಿ ಇಲಾಖೆಯ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ವಿಧಾನ ಸಭೆಗೆ ಮಾಹಿತಿ ನೀಡಿದರು..
ಧರ್ಮ ಅಥವಾ ಸಮುದಾಯ ಗುರಿಯಾಗಿಸಿ ನೋಟಿಸ್ ನೀಡಿಲ್ಲ ಎಂದ ಸಚಿವರು, ಇನ್ನು ಕೆಲವು ದೇವಸ್ಥಾನಗಳಲ್ಲಿ ನಿಗದಿತ ಡೆಸಿಬಲ್‌ ಶಬ್ದಕ್ಕಿಂತ ಹೆಚ್ಚಿನ ಶಬ್ದ ಉಂಟು ಮಾಡುತ್ತಿದ್ದ ಕಾರಣಕ್ಕೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ನೋಟಿಸ್‌ ನೀಡಲಾಗಿತ್ತು. ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿಲ್ಲ. ಅಲ್ಲದೆ ಮುಜರಾಯಿ ಇಲಾಖೆಯಿಂದ ಈ ಬಗ್ಗೆ ಯಾವುದೇ ಆದೇಶವಾಗಿರಲಿಲ್ಲ.ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬಂದಿತ್ತು. ಅದರ ಮೇರೆಗೆ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ ಅಷ್ಟೇ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ನಗರದ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು.
ಹಿಂದೆ ಮಸೀದಿಗಳಿಗೆ ನೋಟಿಸ್:
ಮಸೀದಿಗಳಲ್ಲಿ ಶಬ್ದದಿಂದ ಶಬ್ದಮಾಲಿನ್ಯ ಆಗುತ್ತಿದೆ ಎಂದು ದೂರು ಬಂದಿತ್ತು.. ಹೀಗಾಗಿ ಕರ್ನಾಟಕ ವಕ್ಫ್ ಮಂಡಳಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ನಡುವಿನ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮ ಜಾರಿ ಮಾಡಿದೆ.

ಯಾವ ಪ್ರದೇಶದಲ್ಲಿ ಎಷ್ಟು ಶಬ್ದ ಇರಬೇಕು?

ಕೈಗಾರಿಕೆ ಪ್ರದೇಶ: 75 ಡಿಬಿ (ಹಗಲು), 70 ಡಿಬಿ (ರಾತ್ರಿ)

ವಾಣಿಜ್ಯ ಪ್ರದೇಶ: 65 ಡಿಬಿ (ಹಗಲು), 55 ಡಿಬಿ (ರಾತ್ರಿ)

ವಸತಿ ಪ್ರದೇಶ: 55 ಡಿಬಿ (ಹಗಲು), 45 ಡಿಬಿ (ರಾತ್ರಿ)

ಶಾಂತಿ ಪ್ರದೇಶ: 50 ಡಿಬಿ (ಹಗಲು), 40 ಡಿಬಿ (ರಾತ್ರಿ)

ಇನ್ನು ದೇವಸ್ಥಾನ ಹಾಗೂ ಮಸೀದಿಯ ನೂರು ಮೀಟರ್​ಗಳ ಅಂತರದಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯವಿದ್ದರೆ ಅದನ್ನು ಶಬ್ಧ ರಹಿತ ವಲಯ ಎಂದು ಘೋಷಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಅಥವಾ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ .