ಮನೆ ರಾಷ್ಟ್ರೀಯ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ

0

ಕೋಲ್ಕತ್ತಾ: ಬಂಗಾಳದ ಬಿರ್‌ಭೂಮ್‌ನಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಲು ಸ್ಪೀಡ್ ಬೋಟ್‌ನಲ್ಲಿ ಹೋಗುತ್ತಿದ್ದ ಅಧಿಕಾರಿಗಳ ದೋಣಿಯೊಂದು ಪಲ್ಟಿಯಾಗಿರುವ ಘಟನೆ ಬುಧವಾರ ಸಂಭವಿಸಿದೆ.

Join Our Whatsapp Group

ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹೊರತುಪಡಿಸಿ ಉಳಿದವರೆಲ್ಲರೂ ನದಿಗೆ ಬಿದ್ದಿದ್ದಾರೆ. ಇವರಲ್ಲಿ ಇಬ್ಬರು ಸಂಸದರು, ಒಬ್ಬ ಶಾಸಕ, ಬಿರ್ಭೂಮ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಇತರ ಆಡಳಿತ ಅಧಿಕಾರಿಗಳು ಸೇರಿದ್ದಾರೆ. ಈ ವೇಳೆ ಓರ್ವ ಅಧಿಕಾರಿ ನಾತ್ತೆಯಾಗಿದ್ದು ಉಳಿದ 12 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ, ಕಾರ್ಯಾಚರಣೆ ನಡೆಸಿದ ಬಳಿಕ್ಕ ನಾಪತ್ತೆಯಾದ ಇನ್ನೋರ್ವ ಅಧಿಕಾರಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಬ್‌ಪುರ್‌ನ ಟಿಎಂಸಿ ಶಾಸಕ ಅಭಿಜಿತ್ ಸಿಂಗ್, ಪಕ್ಷದ ಸಂಸದರು, ಅಸಿತ್ ಮಲ್ ಮತ್ತು ಶಮೀರುಲ್ ಇಸ್ಲಾಂ, ಬಿರ್‌ಭೂಮ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಧನ್ ರಾಯ್ ಮತ್ತು ಇತರ ಅಧಿಕಾರಿಗಳು ಬೋಟ್‌ನಲ್ಲಿ ಬೀರ್‌ಭಮ್‌ನ ಬಲರಾಮ್‌ಪುರ ಮತ್ತು ಲ್ಯಾಬ್‌ಪುರದ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪ್ರವಾಹ ಪರಿಶೀಲನೆಗೆ ಬೋಟ್ ನಲ್ಲಿ ತೆರಳುತ್ತಿದ್ದ ಅಧಿಕಾರಿಗಳು ಯಾವುದೇ ಸುರಕ್ಷತಾ ಜಾಕೆಟ್ ಧರಿಸಿಲ್ಲ ಎನ್ನಲಾಗಿದೆ, ಬೋಟ್ ಪಲ್ಟಿಯಾಗುತ್ತಿದ್ದಂತೆ ಅಲ್ಲಿದ್ದ ಸ್ಥಳೀಯ ಈಜುಗಾರರು ನದಿಗೆ ದುಮುಕಿ ಅಧಿಕಾರಿಗಳನ್ನು ರಕ್ಷಣೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು ಪರಿಣಾಮ ಜಲಾಶಯಗಳು ತುಂಬಿದ್ದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಕ್ಕೆ ಬಿಟ್ಟ ಪರಿಣಾಮ ಬಿರ್ಭುಮ್, ಬಂಕುರಾ, ಹೌರಾ, ಹೂಗ್ಲಿ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್, ಪಶ್ಚಿಮ ಬರ್ಧಮಾನ್ ಜಿಲ್ಲೆಗಳು ಜಲಾವೃತವಾಗಿವೆ ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬೋಟ್ ಮೂಲಕ ತೆರಳಿದೆ ಈ ವೇಳೆ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.