ಮನೆ ಅಪರಾಧ ಪ್ರಯಾಣಿಕರ ಬ್ಯಾಗ್ ನಲ್ಲಿ ಯುವಕನ ಶವ ಪತ್ತೆ

ಪ್ರಯಾಣಿಕರ ಬ್ಯಾಗ್ ನಲ್ಲಿ ಯುವಕನ ಶವ ಪತ್ತೆ

0

ನವದೆಹಲಿ: ಪ್ರಯಾಣಿಕರ ಬ್ಯಾಗ್ ನಲ್ಲಿ 22 ವರ್ಷದ ಯುವಕನೊಬ್ಬನ ಶವ ಪತ್ತೆಯಾಗಿರುವ ಘಟನೆ ದೆಹಲಿಯ ಮಂಗೋಲ್‌ಪುರಿ ವೈ ಬ್ಲಾಕ್‌ ಎದುರು ಇರುವ ಪೀರ್ ಬಾಬಾ ಮಜಾರ್ ಮುಖ್ಯರಸ್ತೆ ಸಮೀಪದ ಪ್ರದೇಶದಲ್ಲಿ ಶುಕ್ರವಾರ ಪತ್ತೆಯಾಗಿದೆ.

ಸದ್ಯ ಮೃತ ಯುವಕನ ಗುರುತು ಸಿಕ್ಕಿಲ್ಲ. ಈ ಕುರಿತು ಮಾತನಾಡಿರುವ ಡಿಸಿಪಿ ಶಮೀರ್ ಶರ್ಮಾ, ಪ್ರಕರಣ ಸಂಬಂಧ ಮಂಗೋಲ್‌ಪುರಿ ಪೊಲೀಸ್ ಠಾಣೆಗೆ ಬೆಳಗ್ಗೆ ಸುಮಾರು 7ಕ್ಕೆ ಕರೆ ಬಂದಿದೆ. ಅದರಂತೆ, ಘಟನಾಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿದ ಸಂದರ್ಭ ನೇರಳೆ (ಪರ್ಪಲ್) ಬಣ್ಣದ ಪ್ರಯಾಣಿಕ ಬ್ಯಾಗ್‌ ಸಿಕ್ಕಿದೆ. ಅದರಲ್ಲಿ ಸುಮಾರು 20–22 ವರ್ಷದ ಅಪರಿಚಿತ ವ್ಯಕ್ತಿಯ ಶವ, ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’. ಮೃತ ವ್ಯಕ್ತಿಯು ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿದ್ದಾಗಿಯೂ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಐಪಿಸಿಯ ಸೆಕ್ಷನ್‌ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’. ಅಕ್ಕಪಕ್ಕದ ಠಾಣೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಾಣೆಯಾದವರ ಬಗ್ಗೆ ದಾಖಲಾಗಿರುವ ಪ್ರಕರಣಗಳ ಪರಿಶೀಲನೆಗೆ ತಿಳಿಸಲಾಗಿದೆ ಎಂದೂ ಡಿಸಿಪಿ ತಿಳಿಸಿದ್ದಾರೆ.

ಹಿಂದಿನ ಲೇಖನಆಸ್ತಿ ವಿವಾದ: ಗುಂಡುಹಾರಿಸಿ ತಂದೆಯನ್ನೇ ಕೊಂದ ಮಗ
ಮುಂದಿನ ಲೇಖನಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ