ರಾಮನಗರ: ಲಸಿಕೆ ಪಡೆದ ಕೆಲವೇ ತಾಸಿನಲ್ಲಿ ಮಗು ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸ್ಪೂರ್ತಿ ಮತ್ತು ಮೋಹನ್ ದಂಪತಿಗಳ ಒಂದುವರೆ ತಿಂಗಳ ಗಂಡು ಮಗು ಮೃತಪಟ್ಟಿದೆ. ಬೆಳಿಗ್ಗೆ 11 ಗಂಟೆಗೆ ಪಿಟಿಟಿ ಇಂಜೆಕ್ಷನ್ ನೀಡಲಾಗಿತ್ತು. 1.30ರ ಸುಮಾರಿಗೆ ಮಗು ಸಾವನ್ನಪ್ಪಿದೆ.
ಬೇರೆ 17 ಮಕ್ಕಳಿಗೂ ಇಂಜೆಕ್ಷನ್ ನೀಡಲಾಗಿದ್ದು ಅವರೆಲ್ಲರೂ ಅರೋಗ್ಯವಾಗಿದ್ದಾರೆ. ಲಸಿಕೆಯಿಂದ ಮಗು ಸಾವಿಗೀಡಾಗಲು ಸಾಧ್ಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಾಜು ಸ್ಪಷ್ಟನೆ ನೀಡಿದ್ದಾರೆ.
ಶವಪರೀಕ್ಷೆ ಮಾಡಿಸಿದರೆ ಕಾರಣ ತಿಳಿಯುತ್ತದೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. ಆದರೆ ಪೋಷಕರು ಶವಪರೀಕ್ಷೆಗೆ ಒಪ್ಪಿಗೆ ನೀಡಿಲ್ಲ.
Saval TV on YouTube