ಮನೆ ಕಾನೂನು ಹಿಜಾಬ್​​ ಪ್ರಕರಣ: ಮಹತ್ವದ ನಿರ್ಧಾರ ಕೈಗೊಂಡ ಹೈಕೋರ್ಟ್

ಹಿಜಾಬ್​​ ಪ್ರಕರಣ: ಮಹತ್ವದ ನಿರ್ಧಾರ ಕೈಗೊಂಡ ಹೈಕೋರ್ಟ್

0

ಬೆಂಗಳೂರು: ಉಡುಪಿ ಕಾಲೇಜಿನಲ್ಲಿ  ಹಿಜಾಬ್​​  ಧರಿಸಿಯೇ ತರಗತಿಗೆ ಹಾಜರಾಗಲು ಅನುಮತಿ ನೀಡುವಂತೆ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ವಿಸ್ತೃತ ಪೀಠದಲ್ಲಿ ವಿಚಾರಣೆ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಮಹತ್ವವನ್ನು ಪರಿಗಣಿಸಿ, ಸಿಜೆ ಪೀಠದ ಮುಂದೆ ದಾಖಲೆಯನ್ನು ವರ್ಗಾಯಿಸಲಾಗುತ್ತಿದೆ ಎಂದು ನ್ಯಾ‌.ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹೈಕೋರ್ಟ್  ನಿನ್ನೆ ಪ್ರಕರಣವನ್ನು ಆಲಿಸಿದೆ. ಕೆಲವೊಂದು ಮುಖ್ಯ ಪ್ರಶ್ನೆಗಳನ್ನು ಚರ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿ ಅವರ ಸಮ್ಮತಿ ಕೋರುತ್ತಿದ್ದೇವೆ ಹಾಗೂ ವಿಸ್ತೃತ ಪೀಠದ ಕುರಿತು ನಿರ್ಣಯಿಸುವಂತೆ ಕೋರುತ್ತೇವೆ. ಈ ವಿಚಾರವಾಗಿ ಅರ್ಜಿದಾರರ ಪರ ವಕೀಲರು ಹಾಗೂ ಅಡ್ವೋಕೇಟ್ ಜನರಲ್ ಸಹಮತ ಸೂಚಿಸಿದ್ದಾರೆ. ಹೈಕೋರ್ಟ್ ರಿಜಿಸ್ಟ್ರಿ ಕೂಡಲೇ ಈ ನಿಟ್ಟಿನಲ್ಲಿ ಕೂಡಲೇ ಪ್ರಕರಣದ ದಾಖಲೆಗಳನ್ನು ಸಿಜೆ ಅವರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಮಧ್ಯಂತರ ಆದೇಶದ ಕೋರಿಕೆಯನ್ನು ವಿಸ್ತೃತ ಪೀಠದಲ್ಲಿ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಮಧ್ಯಂತರ ಆದೇಶ ಸದ್ಯಕ್ಕೆ ಇಲ್ಲ. ಮುಂದಿನ ವಿಚಾರಣೆ ವೇಳೆ ಮಧ್ಯಂತರ ಆದೇಶಕ್ಕೆ ಮನವಿ ಮಾಡಲಿ ಎಂದು ಹೈಕೋರ್ಟ್​ ಹೇಳಿತು.  ತಕ್ಷಣವೇ ಸಂಪೂರ್ಣ ಕಡತವನ್ನ ಸಿಜೆಗೆ ಕಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಗೆ ನ್ಯಾ.ಕೃಷ್ಣ ಎಸ್ ದೀಕ್ಷಿತ್ ನಿರ್ದೇಶನ ನೀಡಿದರು. ಹಿಜಾಬ್ ಧರಿಸುವುದನ್ನು ಪರಿಣಾಮಕಾರಿಯಾಗಿ ನಿಷೇಧಿಸಿರುವ ಸರ್ಕಾರದ ಆದೇಶದ ಕಾರಣದಿಂದ ಕಾಲೇಜುಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳ ಬ್ಯಾಚ್ ಅನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಿಸ್ತೃತ ಪೀಠಕ್ಕೆ ವರ್ಗಾಹಿಸಿದೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಈ ವಿಷಯವನ್ನು ದೊಡ್ಡ ಪೀಠಕ್ಕೆ ವರ್ಗಾಹಿಸುವುದು ಅಗತ್ಯವೆಂದು ಪರಿಗಣಿಸಿದ್ದಾರೆ. “ಈ ವಿಷಯವು ದೊಡ್ಡ ಪೀಠದ ಪರಿಗಣನೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನೆರೆಯ ಹೈಕೋರ್ಟ್ ತೀರ್ಪುಗಳನ್ನು ಸಹ ಪರಿಗಣಿಸಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುವಾಗ ವಿದ್ಯಾರ್ಥಿಗಳಿಗೆ ಮಧ್ಯಂತರ ಆದೇಶ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಅದಕ್ಕೆ ಕೋರ್ಟ್​​ ಈ ರೀತಿ ಹೇಳಿತು.
ಅವರಿಗೆ (ಶೈಕ್ಷಣಿಕ ವರ್ಷದ) ಎರಡು ತಿಂಗಳು ಮಾತ್ರ ಉಳಿದಿದೆ, ಅವರನ್ನು ಹೊರಗಿಡಬೇಡಿ ಯಾವುದೇ ಹೆಣ್ಣು ಮಗು ಶಿಕ್ಷಣದಿಂದ ವಂಚಿತವಾಗದ ರೀತಿಯನ್ನು ನಾವು ಕಂಡುಕೊಳ್ಳಬೇಕಾಗಿದೆ … ಇಂದು ಸಂಪೂರ್ಣವಾಗಿ ಮುಖ್ಯವಾದುದು ಶಾಂತಿ, ಸಾಂವಿಧಾನಿಕ ಭ್ರಾತೃತ್ವ. ಎರಡು ತಿಂಗಳಲ್ಲಿ ಯಾವುದೇ ಸ್ವರ್ಗವು ಬೀಳುವುದಿಲ್ಲ ಎಂದು ಹೇಳಿತು. ಇನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಸಜನ್ ಪೂವಯ್ಯ ಅವರು, ರಿಟ್ ಅರ್ಜಿಗಳಲ್ಲಿ ಎತ್ತಿರುವ ಪ್ರಶ್ನೆಗಳು ನ್ಯಾಯಮೂರ್ತಿ ದೀಕ್ಷಿತ್ ಅವರ ರೋಸ್ಟರ್ ಅಡಿಯಲ್ಲಿ ಬರುತ್ತವೆ ಎಂದು ಪ್ರತಿಪಾದಿಸಿದರು. ಹೀಗಾಗಿ ಕಕ್ಷಿದಾರರ ವಾದವನ್ನು ಆಲಿಸಿದ ಬಳಿಕ ಈ ಬಗ್ಗೆ ತೀರ್ಮಾನಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಇಂದು ಕೂಡ ನಾಲ್ಕು ಅರ್ಜಿಗಳು ಸಲ್ಲಿಕೆ ಆಗಿವೆ. ಮುಖ್ಯ ನ್ಯಾಯಮೂರ್ತಿಗಳ ಬಳಿ ಪ್ರಕರಣ ಹೋಗಿದೆ. ಇದು ಕೇವಲ ಹಿಜಾಬ್ ವಿಚಾರ ಅಲ್ಲ, ಮುಸ್ಲಿಂ ಲಾ, ಹಿಂದೂ ಲಾ ವನ್ನು ಕೂಡ ಪರಿಶೀಲನೆ ಮಾಡಬೇಕಿದೆ. ಇದ ಗಂಭೀರ ವಿಚಾರ ಆಗಿರೋದ್ರಿಂದ ಸಿಜೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ವಿದ್ಯಾರ್ಥಿ್ಗಳ ಪರ ಅರ್ಜಿ ಸಲ್ಲಿಸಿರುವ ವಕೀಲ ಶತಬೀಶ್ ಶಿವಣ್ಣ ತಿಳಿಸಿದರು.

ಹಿಂದಿನ ಲೇಖನಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ಶಾಸಕ ಎಂಪಿ ರೇಣುಕಾಚಾರ್ಯ
ಮುಂದಿನ ಲೇಖನಸತ್ಯಮಂಗಲ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ರದ್ದುಪಡಿಸಿ ಹೈಕೋರ್ಟ್ ಆದೇಶ