ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ನ.13ರ ಬುಧವಾರ ರಾತ್ರಿ ನಡೆದಿದೆ.
ರಾತ್ರಿ 8 ಗಂಟೆಯ ಸುಮಾರಿಗೆ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಧರ್ಮದರ್ಶಿ ಮೋಹನ್ ನಂಬಿಯಾರ್ ಅವರ ಬೊಲೆರೋ ವಾಹನ ಜಖಂಗೊಂಡಿದೆ. ಅಲ್ಲದೇ ಕಾಂಪೌಂಡ್ ಗೂ ಹಾನಿಯಾಗಿದೆ. ಕ್ಯಾಂಟರ್ ಚಾಲಕ ಪದ್ದಿಲೇಟಿ ಬಿನ್ ನಾರಾಯಣಪ್ಪ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ನಿವಾಸಿಯಾಗಿದ್ದು, ಅವರ ಎಡಗಾಲು ಹಾಗೂ ಎಡ ಕೈಗೆ ಪೆಟ್ಟಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Saval TV on YouTube