ಬೆಂಗಳೂರು: ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ʼಬೀರ್ ಬಲ್ʼ ಆಗಿ, ʼಓಲ್ಡ್ ಮಾಂಕ್ʼ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದ ನಿರ್ದೇಶಕ ಶ್ರೀನಿ ಶಿವರಾಜ್ ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ ‘A for Apple’ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ ಎಂದು ಸಿನಿಮಾದ ಟೈಟಲ್ ನ್ನು ಪೋಸ್ಟರ್ ಮೂಲ ರಿಲೀಸ್ ಮಾಡಲಾಗಿದೆ.
ಸಿನಿಮಾಕ್ಕೆ ʼಎ ಫಾರ್ ಆನಂದ್ʼ ಎಂದು ಟೈಟಲ್ ಇಡಲಾಗಿದೆ. ರೈಲಿನ ಮೇಲೆ ಶಿವರಾಜ್ ಕುಮಾರ್ ಮ್ಯಾಜಿಕ್ ಪೆನ್ಸಿಲ್ ವೊಂದನ್ನು ಹಿಡಿದು ನಿಂತಿದ್ದಾರೆ. ಅವರ ಹಿಂದೆ ಖುಷಿಯಿಂದ ಮಕ್ಕಳು ನಿಂತಿದ್ದಾರೆ. ರೈಲಿನ ಒಳಗೆ ಪಾಠಶಾಲೆ ಎಂದು ಬರೆಯಲಾಗಿದೆ. ಮೇಲ್ನೋಟಕ್ಕೆ ಶಿವಣ್ಣ ಶಿಕ್ಷಕನಂತೆ ಕಾಣುತ್ತಿದ್ದಾರೆ.