ಮನೆ ಸ್ಥಳೀಯ ಅನಿಲ ಸೋರಿಕೆ ಮೃತಪಟ್ಟ ಕುಟುಂಬಕ್ಕೆ ತಲಾ ೩ ಲಕ್ಷ ರೂ.: ಡಾ. ಹೆಚ್.ಸಿ. ಮಹಾದೇವಪ್ಪ

ಅನಿಲ ಸೋರಿಕೆ ಮೃತಪಟ್ಟ ಕುಟುಂಬಕ್ಕೆ ತಲಾ ೩ ಲಕ್ಷ ರೂ.: ಡಾ. ಹೆಚ್.ಸಿ. ಮಹಾದೇವಪ್ಪ

0

ಮೈಸೂರಿನ ಯರಗನಹಳ್ಳಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ತಲಾ ೩ ಲಕ್ಷ ರೂ.ಗಳನ್ನು ಅವರ ಕುಟುಂಬದವರಿಗೆ ವಿತರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ತಿಳಿಸಿದರು.

Join Our Whatsapp Group

ಶವಗಾರಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ವೀಕ್ಷಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ದುರಂತ ಘಟನೆಯಾಗಿದ್ದು ಇಡೀ ಕುಟುಂಬ ಜೀವ ಕಳೆದುಕೊಂಡಿದೆ. ಸಾರ್ವಜನಿಕರು ಅಡುಗೆ ಅನಿಲ ಉಪಯೋಗಿಸುವಾಗ ಮತ್ತು ನಂತರ ಜಾಗೃತರಾಗಿರಬೇಕು. ಇಂತಹ ಅನಾಹುತಗಳು ಮುಂದೆ ನಡೆಯದಂತೆ ಅನಿಲ ಕಂಪನಿಗಳು ಹಾಗೂ ವಿತರಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ ಹಾಜರಿದ್ದರು.

ಹಿಂದಿನ ಲೇಖನಶಾಸಕರ ಧ್ವನಿ ಅಡಗಿಸಲು ಮುಂದಾಗುವುದು ಒಳ್ಳೆಯ ಬೆಳವಣಿಗೆಯಲ್ಲ: ಆರ್‌.ಅಶೋಕ
ಮುಂದಿನ ಲೇಖನಹೈಡ್ರಾಮಾದ ಬಳಿಕ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದ ಬಿಜೆಪಿ ಶಾಸಕ ಹರೀಶ್ ಪೂಂಜ: ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ