ಮನೆ ಅಪರಾಧ 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ತಂದೆ

25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ತಂದೆ

0

ಸೂರತ್: ಕೌಟುಂಬಿಕ ಕಲಹದಲ್ಲಿ ಕೋಪಗೊಂಡ ವ್ಯಕ್ತಿ ಮಗಳನ್ನು 25 ಬಾರಿ ಚಾಕುವಿನಿಂದ ಇರಿದು  ಹತ್ಯೆ ಮಾಡಿರುವ ಘಟನೆ ಸೂರತ್ ​ನಲ್ಲಿ ನಡೆದಿದೆ.

Join Our Whatsapp Group

ಮೇ 18 ರ ರಾತ್ರಿ ಸೂರತ್‌ ನ ಕಡೋದರಾ ಪ್ರದೇಶದಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣದ ತನಿಖೆ ಮುಂದುವರೆದಂತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ರಾಮಾನುಜ ಎಂದು ಗುರುತಿಸಲಾದ ಆರೋಪಿ ತನ್ನ ಕುಟುಂಬದೊಂದಿಗೆ ಸೂರತ್‌ ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ ನಲ್ಲಿ ವಾಸಿಸುತ್ತಿದ್ದ.  ತಮ್ಮ ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ನಡೆದ ಸಣ್ಣ ಜಗಳದಲ್ಲಿ ಆರೋಪಿಯು ತಾಳ್ಮೆ ಕಳೆದುಕೊಂಡಿದ್ದಾನೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಸರಿಸುಮಾರು ರಾತ್ರಿ 11.20ಕ್ಕೆ, ರಾಮಾನುಜ ಮೊದಲು ತನ್ನ ಮಕ್ಕಳ ಮುಂದೆ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಗಾಯಗೊಂಡಿರುವಾಗ, ಆಕೆಯ ಮಕ್ಕಳು ತಂದೆಯನ್ನು ಹಿಡಿಯಲು ಮುಂದಾಗಿ, ಕೋಪ ನಿಯಂತ್ರಿಸಲು ಪ್ರಯತ್ನಿಸಿದರು. ಆಗ ಕೋಪಗೊಂಡ ವ್ಯಕ್ತಿ ತನ್ನ ಮಗಳನ್ನು ಹಿಡಿದುಕೊಂಡು 25 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.

ಆಕೆ ತಪ್ಪಿಸಿಕೊಂಡು ಕೋಣೆಗೆ ಓಡಿ ಹೋಗಿದ್ದಾಳೆ, ಆದರೂ ಆತ ಬಿಡದೆ ಅಲ್ಲಿಯೇ ಹೋಗಿ ಹಲವು ಬಾರಿ ಚಾಕುವಿನಿಂದ ಇರಿದಿದ್ದ, ಬಳಿಕ ಆಕೆ ಸಾವನ್ನಪ್ಪಿದ್ದಾಳೆ.

ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆಯ ನಂತರವೂ, ರಾಮಾನುಜನು ತನ್ನ ಹೆಂಡತಿಗೆ ಹಾನಿ ಮಾಡಲು ನಿರ್ಧರಿಸಿ ಟೆರೇಸ್​ ಹತ್ತಿದ್ದ. ಈ ಬಗ್ಗೆ ಸೂರತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ರಾಮಾನುಜರನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ.

ಆತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಐಪಿಸಿಯ ಸೆಕ್ಷನ್ ​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.