ಮನೆ ರಾಷ್ಟ್ರೀಯ ಕುದಿಯುತ್ತಿದ್ದ ಸಾಂಬಾರ್ ಕಡಾಯಿಗೆ ಬಿದ್ದು ಯುವಕ ಸಾವು

ಕುದಿಯುತ್ತಿದ್ದ ಸಾಂಬಾರ್ ಕಡಾಯಿಗೆ ಬಿದ್ದು ಯುವಕ ಸಾವು

0

ಚೆನ್ನೈ: ಕುದಿಯುತ್ತಿದ್ದ ಬಿಸಿ ಬಿಸಿ ಸಾಂಬಾರ್ ಕಡಾಯಿಗೆ 21 ವರ್ಷದ ಯುವಕ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡು ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.

Join Our Whatsapp Group

ಯುವಕನ ದೇಹದ ಮೇಲೆ ಸುಟ್ಟ ಗಾಯಗಳ ಉರಿಯಿಂದ ಆಸ್ಪತ್ರೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸಾವನ್ನಪ್ಪಿರುವ ಯುವಕ ಕಾಲೇಜು ವಿದ್ಯಾರ್ಥಿಯಾಗಿದ್ದು, ಹೋಟೆಲ್​​​’ನಲ್ಲಿ ಪಾರ್ಟ್ ಟೈಮ್​ ಆಗಿ ಕೆಲಸ ಮಾಡುತ್ತಿದ್ದ. ಕಳೆದ ವಾರ ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಸಾಂಬರು ಬಡಿಸಲೆಂದು ಸಾಂಬರು ಕಡಾಯಿ ಬಳಿ ಹೋದಾಗ ಅಚಾನಕ್ ಆಗಿ ​​ಕುದಿಯುತ್ತಿರುವ ಸಾಂಬರು ಕಡಾಯಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ತೀವ್ರ ಸುಟ್ಟಗಾಯಗಳಾಗಿರುವ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನತೆಲುಗಿನ ಜನಪ್ರಿಯ ನೃತ್ಯ ನಿರ್ದೇಶಕ ಚೈತನ್ಯ ಆತ್ಮಹತ್ಯೆ
ಮುಂದಿನ ಲೇಖನಮನ್ ಕಿ ಬಾತ್ ಮುಗಿಸಿದ್ದಕ್ಕೆ ಅಭಿನಂದನೆಗಳು, ಈಗಲಾದರೂ ಜನ್ ಕಿ ಬಾತ್ ಕೇಳುತ್ತೀರಾ: ಸಿದ್ದರಾಮಯ್ಯ ಪ್ರಶ್ನೆ