ಮನೆ ಕಾನೂನು ಅಪ್ರಾಪ್ತ ಮಗಳಿಗೆ ಸ್ಕೂಟಿ ಕೊಟ್ಟ ತಂದೆಗೆ ೨೫ ಸಾವಿರ ರೂ. ದಂಡ, ೧ ದಿನ ಸಜೆ

ಅಪ್ರಾಪ್ತ ಮಗಳಿಗೆ ಸ್ಕೂಟಿ ಕೊಟ್ಟ ತಂದೆಗೆ ೨೫ ಸಾವಿರ ರೂ. ದಂಡ, ೧ ದಿನ ಸಜೆ

0

ಕುಶಾಲನಗರ: ನಿಮ್ಮ ವಾಹನಗಳನ್ನು ಅಪ್ರಾಪ್ತರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಚಾಲನೆ ಮಾಡಲು ಕೊಟ್ಟಿದ್ದೇ ಆದಲ್ಲಿ ಮಾಲೀಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಅಪ್ರಾಪ್ತ ಮಗಳಿಗೆ ಚಾಲನೆ ಮಾಡಲು ಸ್ಕೂಟಿ ನೀಡಿದ ತಂದೆಯೊಬ್ಬರಿಗೆ ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯ ೨೫ ಸಾವಿರ ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ತೀರ್ಪು ನೀಡಿದೆ.
ಸ್ಕೂಟಿ ಮಾಲೀಕತ್ವ ಹೊಂದಿದ್ದ ತಂದೆಗೆ ಶಿಕ್ಷೆ ವಿಧಿಸುವ ಜೊತೆಗೆ ಸ್ಕೂಟಿ ಚಾಲನೆ ಮಾಡಿದ ಅಪ್ರಾಪ್ತ ಬಾಲಕಿಗೂ ೧೭೦೦ ರೂ.ದಂಡ ವಿಧಿಸಲಾಗಿದೆ. ನಂಜರಾಯ ಪಟ್ಟಣದ ನಿವಾಸಿ ಅಂಥೋಣಿ ಎಂಬವರೇ ದಂಡ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ವಿವರ: ಕಳೆದ ಜನವರಿ ೬ ರಂದು ದುಬಾರೆ ಪೆಟ್ರೋಲ್ ಬಂಕ್ ಬಳಿ ತ್ಯಾಗತ್ತೂರಿನ ಸಮೀರ್ ಎಂಬುವರು ಚಾಲನೆ ಮಾಡುತ್ತಿದ್ದ ಬುಲೆಟ್ ಬೈಕ್ ಮತ್ತು ಅಪ್ರಾಪ್ತ ಬಾಲಕಿ ಓಡಿಸುತ್ತಿದ್ದ ಸ್ಕೂಟಿ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಸಮೀರ್ ಅವರು ಕುಶಾಲನಗರ ಸಂಚಾರ ಠಾಣೆಗೆ ದೂರು ಸಲ್ಲಿಸಿದರು. ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕಿ ಚಾಲನೆ ಮಾಡಿದ ಸ್ಕೂಟಿಯ ಆರ್‌ಸಿ ಮಾಲೀಕನಾದ ಆಕೆ ತಂದೆಯ ವಿರುದ್ಧ ಅಪ್ರಾಪ್ತೆಗೆ ಚಾಲನೆ ಮಾಡಲು ವಾಹನ ನೀಡಿದ ಆರೋಪದ ಮೇರೆಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಂಥೋಣಿ ಅವರಿಗೆ ದಂಡ ಶಿಕ್ಷೆ ವಿಧಿಸಿದ್ದಾರೆ.

ಹಿಂದಿನ ಲೇಖನಅಧಿಕಾರ, ಸ್ಥಾನ ಮಾನ ನೀಡಿದ ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಕಾಂಗ್ರೆಸ್ ತೊರೆಯಲು ಸಿದ್ದರಾದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ