ಮನೆ ಮನರಂಜನೆ ಫೆ.10 ರಂದು ‘ರೂಪಾಯಿ’ ಚಿತ್ರ ಬಿಡುಗಡೆ

ಫೆ.10 ರಂದು ‘ರೂಪಾಯಿ’ ಚಿತ್ರ ಬಿಡುಗಡೆ

0

ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ ‘ರೂಪಾಯಿ’ ಚಿತ್ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದ್ದು, ಚಿತ್ರದ ಮೋಷನ್ ಪೋಸ್ಟರ್’ನ್ನು ಖ್ಯಾತ ನಟ ಡಾಲಿ ಧನಂಜಯ ಬಿಡುಗಡೆ ಮಾಡಿದರು.

ಈಗಾಗಲೇ ಆನಂದ್ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆ ಪಡೆದುಕೊಂಡಿದೆ.

‘ರೂಪಾಯಿ’ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ.

ವಿಜಯ್ ಜಗದಾಲ್, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ, ರಾಮ ಚಂದನ್, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ., ಹರೀಶ್ ಬಿ.ಕೆ. ಮತ್ತು ವಿನೋದ್ ಎನ್. ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಪ್ರಮೋದ್ ಶೆಟ್ಟಿ, ಮೋಹನ್ ಜುನೇಜ, ರಾಕ್‌ಲೈನ್‌ ಸುಧಾಕರ್, ಅನಿಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಆರ್.ಡಿ. ನಾಗಾರ್ಜುನ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ.

ಹಿಂದಿನ ಲೇಖನಬಿಜಿಎಸ್ ವಿದ್ಯಾಸಂಸ್ಥೆಯಿಂದ  ಶಿಕ್ಷಣಕ್ಕೆ ಪ್ರೇರಣೆ: ಸಚಿವ ಕೆ.ಗೋಪಾಲಯ್ಯ ಶ್ಲಾಘನೆ
ಮುಂದಿನ ಲೇಖನಚಿಕ್ಕಮಗಳೂರು ಹಬ್ಬ ಜನರಲ್ಲಿ ಉತ್ಸಾಹ ತುಂಬಲಿದೆ : ಸಿಎಂ ಬೊಮ್ಮಾಯಿ