ಮನೆ ಮನರಂಜನೆ ರಿಕ್ಕಿಕೇಜ್ ಸಂಗೀತ ನಿರ್ದೇಶನದ ಚಿತ್ರ ಆಸ್ಕರ್‌ಗೆ ಎಂಟ್ರಿ..!

ರಿಕ್ಕಿಕೇಜ್ ಸಂಗೀತ ನಿರ್ದೇಶನದ ಚಿತ್ರ ಆಸ್ಕರ್‌ಗೆ ಎಂಟ್ರಿ..!

0

ಮೂರು ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರ ಸಂಗೀತ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಈ ಖುಷಿಯನ್ನು ಖುದ್ದು ರಿಕ್ಕಿ ಕೇಜ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಪಾಪಾ ಬುಕಾ” ಇದು ಪಪುವಾ ನ್ಯೂಗಿನಿಯಾದ ಮೊದಲ ಅಧಿಕೃತ ಆಸ್ಕರ್ ಪ್ರವೇಶ ಪಡೆದ ಚಿತ್ರವಾಗಿದೆ. ಈ ಚಿತ್ರಕ್ಕೆ ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಡಾ.ಬಿಜು ನಿರ್ದೇಶಿಸಿದ `ಪಾಪಾ ಬುಕಾ’ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ಆಯ್ಕೆಯಾಗಿದೆ

ಕರ್ನಾಟಕದ ಮೂಲದ ರಿಕ್ಕಿ ಕೇಜ್ ತಮ್ಮ ಚಿತ್ರ ಅಧಿಕೃತವಾಗಿ ಆಸ್ಕರ್ ಪ್ರವೇಶ ಪಡೆದಿರುವ ವಿಚಾರ ಹಂಚಿಕೊಂಡು ಹೆಮ್ಮೆಪಟ್ಟಿದ್ದಾರೆ. “ಇದು ಆಸ್ಕರ್ ಸ್ಪರ್ಧೆಯಲ್ಲಿ ಮೊದಲ ಹೆಜ್ಜೆ, ಆದರೆ ನನಗೆ 3000 ವರ್ಷಗಳ ಹಿಂದಿನ ಇತಿಹಾಸದಲ್ಲಿ ಬೇರೂರಿರುವ ಸಂಗೀತವನ್ನು ರಚಿಸುವುದರಲ್ಲಿ ಸಂತೋಷವಿದೆ” ಎಂದು ತಮಗಾದ ಸಂತಸವನ್ನು ಹಂಚಿಕೊಂಡಿದ್ದಾರೆ.