ವೈಶಾಖ ಶು. 5.ಈ ದಿನದಲ್ಲಿ ಆಕಾಶದಲ್ಲಿ ಮೋಡಗಳು ಉತ್ಪನ್ನವಾದರೆ ಮತ್ತು ಅಲ್ಪಸ್ವಲ್ಪ ಮಳೆಯಾದರೆ ಆ ದಿನ ಧಾನ್ಯಗಳನ್ನು ಸಂಗ್ರಹಿಸಿ, ಮುಂದೆ ಶ್ರಾವಣ ಭಾದ್ರಪದ ಮಾಸಗಳಲ್ಲಿ ಮಾರಿದರೆ ತುಂಬ ಲಾಭವುಂಟು. ವೈಶಾಖ ಶು. ಏಳು ಈ ದಿನ ಶನಿವಾರವಾಗಿದ್ದು, ಆ ದಿವಸ ಭರಣಿ, ಕೃತಿಕಾ, ರೋಹಿಣಿ, ಮೃಗಶಿರ ಇವುಗಳಲ್ಲಿ ಯಾವುದಾದರೂಂದು ನಕ್ಷತ್ರವಿದ್ದರೆ ಕೊಬ್ಬರಿ,ತೆಂಗು,ಅಡಿಕೆ,ಕೆಂಪು, ವಸ್ತ್ರ, ತಾಮ್ರಾ, ಇವುಗಳು ತೇಜಿಯಲ್ಲಿ ಮಾರಾಟವಾಗುವವು.
ವೈಶಾಖ ಶು.15( ಹುಣ್ಣಿಮೆ ). ನೇದಿನ ಗ್ರಹಣ ನಕ್ಷತ್ರಪಾತ ಭೂಕಂಪನ, ಸೂರ್ಯ ಚಂದ್ರರಿಗೆ ಕಣ ಕಟ್ಟುವಿಕೆ ಮಳೆ, ಗುಡುಗು ಮಿಂಚು ಆಕಾಶದಲ್ಲಿ ಧೂಮಕೇತು, ಮಾಡೋಣ ಇತ್ಯಾದಿಗಳಲ್ಲಿ ಯಾವುದಾದರೂಂದು ಸಂಭವಿಸಿದರೆ ಹತ್ತಿಯು ತೇಜಿಯಾಗಿ ಮಾರುವದು.
ಇದೇ ಸಮಯದಲ್ಲಿ ಗೋಧಿ.ಹೆಸರು, ಉದ್ದು ಮುಂತಾದ ಅಕ್ಕಡಿ ಕಾಳುಗಳನ್ನು ಸಂಗ್ರಹಿಸಿಟ್ಟು ಮುಂದೆ ಆಷಾಢ ಶ್ರಾವಣಗಳಲ್ಲಿ ಮಾರಿದರೆ ತುಂಬಾ ಲಾಭವಿದೆ. ವೈಶಾಖ ಶ. 13 ಅಥವಾ ಕೃ. ಪ. 13 ಈ ತಿಥಿಯಲ್ಲಿ ಮಂಗಳವಾರ ಅಥವಾ ರವಿವಾರವಾದರೆ ಬೆಲ್ಲ, ಸಕ್ಕರೆ, ವೀಳ್ಯೆದೆಲೆಗಳು. ಸೈಂಧಲವಣ ಇತ್ಯಾದಿ ರಸ ಪಾದಾರ್ಥ ತೇಜಿಯಿಂದ ಮಾರುವವಲ್ಲದೆ ಈ ವಸ್ತುಗಳ ಅಭಾವವೂ ಕಂಡು ಬರುವುದು.