ಮನೆ ರಾಜ್ಯ ಪಠ್ಯಕ್ರಮ, ಅಕ್ಷರದ ವಿಷಯದಲ್ಲಿ ಸರ್ಕಾರ ಹಠ ಮಾಡಬಾರದು: ಎಂಎಲ್ಸಿ ಹೆಚ್.ವಿಶ್ವನಾಥ್

ಪಠ್ಯಕ್ರಮ, ಅಕ್ಷರದ ವಿಷಯದಲ್ಲಿ ಸರ್ಕಾರ ಹಠ ಮಾಡಬಾರದು: ಎಂಎಲ್ಸಿ ಹೆಚ್.ವಿಶ್ವನಾಥ್

0

ಮೈಸೂರು(Mysuru): ಪಠ್ಯಕ್ರಮದ ವಿಷಯದಲ್ಲಿ ಮತ್ತು ಅಕ್ಷರದ ಮೇಲೆ ಸರ್ಕಾರ ಹಠ ಮಾಡಬಾರದು; ಪ್ರತಿಷ್ಠೆಯಾಗಿ ಸ್ವೀಕರಿಸಬಾರದು ಎಂದು ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಒತ್ತಾಯಿಸಿದರು.

ಇಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ವಿಷಯದಲ್ಲಿ ಸರ್ಕಾರ ಹಠ ಮಾಡಲಿ, ಶಿಕ್ಷಣ ರಂಗವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿ. ಆದರೆ ಪಠ್ಯಕ್ರಮ ವಿಷಯದಲ್ಲಿ ಹಠ ಮಾಡಬಾರದು ಎಂದರು.

ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸುವ ಪಠ್ಯಕ್ರಮಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಆದ್ದರಿಂದ, ಆ ಪಠ್ಯವನ್ನು ಹಿಂಪಡೆದು ಪ್ರಸಕ್ತ ಸಾಲಿನಲ್ಲಿ ಹಳೆಯದ್ದನ್ನೇ ಬೋಧಿಸಬೇಕು ಎಂದು ಒತ್ತಾಯಿಸಿದರು.

ಪಠ್ಯ ಪರಿಷ್ಕರಣೆ ‍ಪ್ರಕ್ರಿಯೆ ಯಾವುದೋ ಪಕ್ಷದ ಕಾರ್ಯಕ್ರಮವಲ್ಲ ಕಿಡಿಕಾರಿದ ಅವರು, ಸದ್ಯ ಶಿಕ್ಷಣ ಇಲಾಖೆ ಅಧೋಗತಿಗೆ ಹೋಗುತ್ತಿದೆ. ಶಿಕ್ಷಣ ಇಲಾಖೆಯ ಗೊಂದಲಕ್ಕೆ ಕಂದಾಯ ಮಂತ್ರಿ ಉತ್ತರ ಕೊಡಬೇಕಾ? ನಗರಾಭಿವೃದ್ಧಿ ಸಚಿವರು ಉತ್ತರಿಸುತ್ತಾರೆ ಎಂದರೆ ಏನರ್ಥ? ಶಿಕ್ಷಣ ಸಚಿವ ನಾಗೇಶ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಹಿತಿಗಳು, ಪೋಷಕರು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ವಿಸ್ತೃತವಾಗಿ ಚರ್ಚಿಸಿ ಪಠ್ಯಪುಸ್ತಕ ಪರಿಷ್ಕರಿಸಬೇಕು. ಮುಂದಿನ ಶೈಕ್ಷಣಿಕ ಸಾಲಿನಿಂದ ಎಲ್ಲವನ್ನೂ ಸರಿಪಡಿಸಬೇಕು  ಎಂದು ತಿಳಿಸಿದರು.

ಎಸ್.ಎಲ್.ಭೈರಪ್ಪ ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ:

ಪಠ್ಯ ಪರಿಷ್ಕರಣೆ ಪರ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭೈರಪ್ಪ ದೊಡ್ಡ ಸಾಹಿತಿ. ಅವರು ಬಿಜೆಪಿ ವಕ್ತಾರರ ರೀತಿ ಮಾತನಾಡಬಾರದು. ಸಾರಸ್ವತ ಲೋಕದ ಸೌಂದರ್ಯ ಹೆಚ್ಚಿಸಬೇಕೇ ಹೊರತು, ಪಕ್ಷದ ವಕಾಲತ್ತು ವಹಿಸಬಾರದು. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಹಿಂದಿನ ಲೇಖನನವಜಾತ ಶಿಶು ಹತ್ಯೆ:  ಆರೋಪದಿಂದ ತಾಯಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್
ಮುಂದಿನ ಲೇಖನಚಿಕ್ಕಮಗಳೂರು: ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತರಾದ 49ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು