ಮನೆ ಸುದ್ದಿ ಜಾಲ ಅದ್ದೂರಿಯಾಗಿ ಜರುಗಿದ ಮಲೆ ಮಾದೇಶ್ವರನ ಹಾಲರವಿ ಉತ್ಸವ

ಅದ್ದೂರಿಯಾಗಿ ಜರುಗಿದ ಮಲೆ ಮಾದೇಶ್ವರನ ಹಾಲರವಿ ಉತ್ಸವ

0

ಮೈಸೂರು(Mysuru):  ಜಿಲ್ಲೆಯ ನಂಜನಗೂಡು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಮಲೆ ಮಹದೇಶ್ವರ ಹಾಲರವಿ ಉತ್ಸವ ಅದ್ದೂರಿಯಾಗಿ ಜರುಗಿತು.

ಕಪಿಲಾ ನದಿಯಿಂದ 101 ಹೆಣ್ಣುಮಕ್ಕಳಿಂದ ಕಳಸದಲ್ಲಿ ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡು ಹಾಗೂ ವೀರಗಾಸೆ, ಕಂಸಾಳೆ ಕಲಾತಂಡ, ಡೊಳ್ಳು ಕುಣಿತ, ಕಡ ಪಡೆಯ ಕುಣಿತ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಗ್ರಾಮದಲ್ಲಿರುವ ಮನೆಯ ಮಾದೇಶ್ವರನ ದೇವರಲ್ಲಿ ಅಂತ್ಯಗೊಳಿಸಲಾಯಿತು.

ಈ ಮೆರವಣಿಗೆಯಲ್ಲಿ ಕಡಕೋಳ ಬೀರೇಶ್ವರ ದೇವಾಲಯದ ಬಸವ ಕಳಸ ಬತ್ತು ಸಾಗಿರುವುದು ವಿಶೇಷವಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾಯತ್ರಿ ಮಹದೇವು ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಗ್ರಾಮದಲ್ಲಿ ಈ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ.  ಆದರೆ ಈ ಬಾರಿ ಯಾವುದೇ ತೊಂದರೆ ಇಲ್ಲದ ಕಾರಣ ಗ್ರಾಮದಲ್ಲಿ ಅದ್ದೂರಿಯಾಗಿ ಮಲೆ ಮಾದೇಶ್ವರನ ಉತ್ಸವವನ್ನು ಆಚರಿಸಲಾಯಿತು. ಗ್ರಾಮದ ಒಳಿತಿಗಾಗಿ ನಾವು ಶ್ರದ್ಧಾಭಕ್ತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಈ ಉತ್ಸವದಲ್ಲಿ ಕಂಸಾಳೆ ಕಲಾತಂಡ , ವೀರಗಾಸೆ ಕುಣಿತ,  ಮಹಿಳೆಯರ ಡೊಳ್ಳು ಕಣಿತ ಭಕ್ತಾದಿಗಳ ಗಮನಸೆಳೆಯಿತು.

ಹಿಂದಿನ ಲೇಖನಡಿ.23ಕ್ಕೆ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣ
ಮುಂದಿನ ಲೇಖನದೀಪವು ಮನೆ, ಬದುಕನ್ನು ಬೆಳಗುವ ಶಕ್ತಿ ಹೊಂದಿದೆ: ಸವಿತಾ ಘಾಟ್ಕೆ