ಮನೆ ಸ್ಥಳೀಯ ಮೈಸೂರಿನಲ್ಲಿ ನಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

ಮೈಸೂರಿನಲ್ಲಿ ನಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

0

ಮೈಸೂರು: ಕಂದಾಯ ಇಲಾಖೆ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ವತಿಯಿಂದ ನಡೆಯುವ “ನಕ್ಷಾ” ನಗರ ಪ್ರದೇಶಗಳಲ್ಲಿನ ಆಸ್ತಿಗಳಿಗೆ ಭೂ ದಾಖಲೆಗಳ ರಚನೆ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಮೈಸೂರಿನ ಬೋಗಾದಿಯ ರಂಗಮoದಿರದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡರು ಚಾಲನೆ ನೀಡಿದರು.

Join Our Whatsapp Group

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭೂಮಾಲೀಕತ್ವದ ನಿಖರವಾದ ದಾಖಲಾತಿಯನ್ನು ರಚಿಸಲು ಮತ್ತು ನವೀಕರಿಸಲು, ಭೂ ವಿವಾದಗಳನ್ನು ಪರಿಹರಿಸಲು, ಆಸ್ತಿ ದಾಖಲೆಗಳನ್ನು ಸುಗಮಗೊಳಿಸಲು ಮತ್ತು ನಗರ ಯೋಜನೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯು 194 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಕೇಂದ್ರದಿಂದ ಸಂಪೂರ್ಣವಾಗಿ ಹಣವನ್ನು ವಿನಿಯೋಗ ಮಾಡಿದೆ. ರಾಜ್ಯ ಸರ್ಕಾರವು ಸಹ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಸಂತಸದ ವಿಷಯ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ  ಮೈಸೂರು ಪ್ರಾದೇಶಿಕ ಭೂ ದಾಖಲೆಗಳ ನಿರ್ದೇಶಕರಾದ ಇ. ಪ್ರಕಾಶ್ ಅವರು ಸದರಿ ಪ್ರಾಯೋಗಿಕ ಯೋಜನೆಯು ಕರ್ನಾಟಕದ 10 ನಗರ ಪ್ರದೇಶ ಗಳನ್ನೊಳಗೊಂಡಂತೆ ಭಾರತ ದೇಶದಾದ್ಯಂತ 152 ನಗರ ಪ್ರದೇಶ (ULB)ಗಳಲ್ಲಿ ಇಂದಿನಿಂದ ಅಳತ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು ಡ್ರೋನ್ ಮೂಲಕ ಏರಿಯಲ್ ಸರ್ವೆ ಮಾಡಿ ಸರ್ವೇ ಆಫ್ ಇಂಡಿಯಾ ಅವರಿಂದ ORI SHEET ಪಡೆದು ROVER ಅಳತೆ ಮಾಪನದ ಮೂಲಕ  GROUND TRUTHING ಕಾರ್ಯ ಪೂರ್ಣಗೊಳಿಸಿ, ಹಕ್ಕುದಾಖಲೆಗಳ ಕುರಿತು ವಿಚಾರಣೆ ನಡೆಸಿ, ಆಸ್ತಿದಾರರಿಗೆ ಅಂತಿಮವಾಗಿ ಪಾಪರ್ಟಿ ಕಾರ್ಡ್  ವಿತರಿಸಲಾಗುವುದು. ಈ ಪ್ರಾಯೋಗಿಕ ನಕ್ಷಾ ಯೋಜನೆಯನ್ನು  ಸರ್ವೆ ಆಫ್ ಇಂಡಿಯಾ, ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಹಾಗೂ ಪೌರಾಡಳಿತ ಇಲಾಖೆಗಳ ಸಹ ಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ನೀವು ಆಸ್ತಿ ಕೊಂಡು ಕೊಳ್ಳುವ ಸಿದ್ಧತೆ ಯಲ್ಲಿದರೆ ನಿಮ್ಗೆ ಡಾಕ್ಯುಮಂಟ್ಸ್ ವಿಷ್ಯದಲಿ ಸಾಕಷ್ಟು ಮೋಸ ಹೋಗುವ ಸಾಧ್ಯತ್ಯೆ ಇರುತದೆ ಆದರೆ ಪಿಆರ್ ಕಾರ್ಡ್ ಹೊಂದಿರುವ ಆಸ್ತಿ ಯಲ್ಲಿ ಯಾವುದೇ ವಂಚನೆ ಆಗುವ ಸಾಧ್ಯತೆ ಇರುವುದಿಲ್ಲ. ಕಂದಾಯ ಇಲಾಖೆ,ಭೂ ಮಾಪನ ಇಲಾಖೆ,ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಇಂದು ನಕ್ಷಾ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಭೂ ಮಾಪನ ಇಲಾಖೆಯ ಉಪ ನಿರ್ದೇಶಕರಾದ ಸೀಮಾತಿನಿ,  ಡಿಡಿಎಲ್ಆರ್ ಇಲಾಖೆಯ ರಮ್ಯಾ, ನಗರ ಯೋಜನಾ ಅಧಿಕಾರಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.