ಬೆಂಗಳೂರು: ಮೇಕೆದಾಟು ಹೋರಾಟ ನಾವು ಇಲ್ಲೆಗೆ ಅಂತ್ಯ ಮಾಡಲ್ಲ ಜನರ ಬಳಿಗೆ ಹೋಗುತ್ತೇವೆ ಜನರ ಮಧ್ಯೆ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆಯ ಸಮಾರೋಪ ಇಂದು ನಡೆಯಲಿದ್ದು ಈ ಮೂಲಕ ಪಾದಯಾತ್ರೆ ಅಂತ್ಯವಾಗಲಿದೆ. ಆದರೆ ಮೇಕೆದಾಟು ಯೋಜನೆ ಹೋರಾಟವನ್ನು ಮುಂದುವರೆಸುವುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಐತಿಹಾಸಿಕ ಪಾದಯಾತ್ರೆ ಇಂದು ಅಂತ್ಯವಾಗುತ್ತಿದೆ. ಬೆಂಗಳೂರು ಜನರಿಗೆ ಕುಡಿವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದಿನ 50 ವರ್ಷಗಳಿಗಾಗಿ ಈ ಯೋಜನೆ ಜಾರಿ ಮಾಡಬೇಕು.
ನಮ್ಮ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದವು. ಆದರೆ ಗೋವಿಂದ ಕಾರಜೋಳ ಯೋಜನೆ ಅನುಷ್ಟಾನಕ್ಕೆ ವಿಳಂಬ ಮಾಡಿ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಮೇಕೆದಾಟು ಹೋರಾಟ ನಾವು ಇಲ್ಲೆಗೆ ಅಂತ್ಯ ಮಾಡಲ್ಲ ಜನರ ಬಳಿಗೆ ಹೋಗುತ್ತೇವೆ ಜನರ ಮಧ್ಯೆ ಹೋರಾಟ ಮಾಡುತ್ತೇವೆ ಎಂದು ನುಡಿದರು.