ಮನೆ ಅಪರಾಧ ಮೈಸೂರು: ಅಪಘಾತವೆಂದು ಬಿಂಬಿಸಿ ಕೇಂದ್ರ ಇಂಟಲಿಜೆನ್ಸ್ ಬ್ಯೂರೊ ನಿವೃತ್ತ ಅಧಿಕಾರಿಯ ಕೊಲೆ

ಮೈಸೂರು: ಅಪಘಾತವೆಂದು ಬಿಂಬಿಸಿ ಕೇಂದ್ರ ಇಂಟಲಿಜೆನ್ಸ್ ಬ್ಯೂರೊ ನಿವೃತ್ತ ಅಧಿಕಾರಿಯ ಕೊಲೆ

0

ಮೈಸೂರು(Mysuru):  ಸಾಂಸ್ಕೃತಿಕ ನಗರಿ ಮೈಸೂರಿನ ಕೇಂದ್ರ ಇಂಟಲಿಜೆನ್ಸ್ ಬ್ಯೂರೊದ ನಿವೃತ್ತ ಅಧಿಕಾರಿಯನ್ನು ಕೊಲೆ ಮಾಡಲಾಗಿದ್ದು, ಅಪಘಾತವೆಂದು ಬಿಂಬಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

83 ವರ್ಷದ ಆರ್.ಎಸ್.ಕುಲಕರ್ಣಿ ಎಂಬುವರೆ ಕೊಲೆಯಾದ ನಿವೃತ್ತ ಅಧಿಕಾರಿ.

ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್’ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಷದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಅಪಘಾತವಾಗಿದ್ದು, ತೀವ್ರ ಗಾಯಗೊಂಡ ಕುಲಕರ್ಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು.

ಮೇಲ್ನೋಟಕ್ಕೆ ಇದು ಅಪಘಾತವೆಂಬಂತೆ ಕಂಡು ಬಂದರೂ ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೊಂದು ಹಿಟ್ ಅಂಡ್ ರನ್ ಕೇಸ್ ಇರಬಹುದೆಂದು ಅನುಮಾನ ವ್ಯಕ್ತಪಡಿಸಿ ಇಂದು ಬೆಳಿಗ್ಗೆ ಘಟನಾ ಸ್ಥಳದ ಸಿಸಿಟಿವಿ ಪರಿಶೀಲಿಸಿರುವ ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದೆ.

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು  ಆರೋಪಿಗಳು ಅಪಘಾತವೆಸಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಗೊತ್ತಾಗಿದೆ. ರಸ್ತೆ ಬದಿಗೆ ನಿಂತಿದ್ರೂ ಅಪಘಾತವೆಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳದಲ್ಲಿ ಕೃತ್ಯವೆಸಗಿದ ಕಾರಿನ ಮಿರರ್ ಪತ್ತೆಯಾಗಿದೆ.

ಈ ಕುರಿತು ಮಾತನಾಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪ್ರಕಣರದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದೇವೆ. ಎಸಿಪಿ ನೇತೃತ್ವದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಶೀಘ್ರವೇ ಪ್ರಕರಣ ಬೇಧಿಸಲಿದ್ದೇವೆ. ಕುಲಕರ್ಣಿಯವರು ನಿವೃತ್ತರಾಗಿ 23 ವರ್ಷಗಳಾಗಿವೆ. ಕೊಲೆಗೆ ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ವೈಷಮ್ಯ ಕಾರಣವೇ ಎಂದು ಈಗಲೇ ಏನೂ ಹೇಳಲಾಗದು ಎಂದು ತಿಳಿಸಿದ್ದಾರೆ.

ಈ ಸಂಬಂಧ ಜಯಲಕ್ಷ್ಮಿಪುರಂ ಪೋಲಿಸ್ ಸ್ಟೇಷನ್ ನಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಆಹಾರಗಳಿವು
ಮುಂದಿನ ಲೇಖನಒಟಿಟಿಗೆ ಲಗ್ಗೆ ಇಡುತ್ತಿರುವ ಮಾನ್ಸೂನ್ ರಾಗ , ಗುರು ಶಿಷ್ಯರು ಚಿತ್ರಗಳು