ಕಲಬುರಗಿ (Kallburgi): ಪುರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಗಿರೀಶ್ ಕಂಬಾನೂರ್ (40) ಹತ್ಯೆಯಾದವರು. ದುಷ್ಕರ್ಮಿಗಳು ಶಹಾಬಾದ್ ನ ಸ್ಟೇಷನ್ ಏರಿಯಾದಲ್ಲಿ ಗಿರೀಶ್ ಕಂಬಾನೂರ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಸ್ತುತ ಮೃತ ಗಿರೀಶ್ ಅವರ ಪತ್ನಿ ಶಹಾಬಾದ್ ನಗರಸಭೆಯ ಅಧ್ಯಕ್ಷರಾಗಿದ್ದಾರೆ. ಇನ್ನು 2 ವರ್ಷದ ಹಿಂದೆ ಗಿರೀಶ್ ಸಹೋದರನ ಹತ್ಯೆಯಾಗಿತ್ತು.