★ ಕಾಮಾಲೆ ಮತ್ತು ಯಕೃತ್ತಿನ : ತೊಂದರೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚೆಯಷ್ಟು ಅಮೃತಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು.ಅಲ್ಲದೇ ಅಮೃತಬಳ್ಳಿಯ ಎಲೆಗಳಿಂದ ತಯಾರಿಸಿದ ತಂಬುಳಿಯನ್ನು ಆಹಾರದಲ್ಲಿ ಸೇವಿಸಬೇಕು.
★ಸಂಧಿವಾತ : ಅಂದರೆ ಮಂಡಿ ನೋವಿನಿಂದ ಬಳಲುವವರು ಒಂದು ಚಮಚೆ ಅಮೃತಬಳ್ಳಿಯ ರಸದೊಂದಿಗೆ ಒಂದು ಚಮಚೆ ಶುಂಠಿರಸ ಮತ್ತು ಜೇನುತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.
★ ಮಧುಮೇಹ : ದಿಂದ ಬಳಲುವರು ಎರಡು ಚಮಚ ಅಮೃತಬಳ್ಳಿಯ ರಸ ಅಥವಾ ಕಷಾಯ ತಯಾರಿಸಿ ಕುಡಿಯಬೇಕು. ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಕುಡಿಯಬೇಕು ಬೆಳಿಗ್ಗೆ ಮೂರು ನಾಕು ಅಮೃತಬಳ್ಳಿಯ ಎಲೆಗಳನ್ನು ಅಗಿದು ತಿನ್ನುವುದೂ ಮಧುಮೇಹಿಗಳಿಗೆ ಒಳ್ಳೆಯದು.
★ಅಧಿಕ ರಕ್ತದೊತ್ತಡ: ದಿಂದ ಬಳಲುವವರು ಅಮೃತಬಳ್ಳಿಯ ರಸವನ್ನು ಪ್ರತಿದಿನ ಬೆಳಿಗ್ಗೆ ಎರಡು ಚಮಚೆಯಷ್ಟನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು.
★ ಸ್ತ್ರೀಯರಲ್ಲಿ ಮಾಸಿಕ ರಕ್ತಸ್ರಾವ* : ಅಧಿಕವಾಗುತ್ತಿದ್ದಲ್ಲಿ ಅಮೃತಬಳ್ಳಿಯ ರಸವನ್ನು ಮೂರು ಚಮಚೆಯಷ್ಟನ್ನು ಸಕ್ಕರೆ ಬೆರೆಸಿ ದಿನಕ್ಕೆರಡುಬಾರಿ ಸೇವನೆ ಮಾಡಬೇಕು.
★ಮಕ್ಕಳಲ್ಲಿ ರೋಗನಿರೋಧಕ ಶಕ್ತಿ : ಹೆಚ್ಚಾಗುವುದಕ್ಕೆ ಅಮೃತಬಳ್ಳಿಯ ರಸವನ್ನು ಹಾಲು ಸಕ್ಕರೆಯೊಂದಿಗೆ ಕುಡಿಸಬೇಕು.
★ಹೃದ್ರೋಗದಿಂದಬಳಲುವವರೆಗೂ : ಅಮೃತಬಳ್ಳಿಯ ಸೇವನೆ ಒಳ್ಳೆಯದು ಇದರಿಂದ ಹೃದಯದ ಕಾರ್ಯಕ್ಷಮತೆ ಹೆಚ್ಚುತ್ತದೆ.
★ಕೆಮ್ಮಿನ :ತೊಂದರೆ ಇರುವವರು ಅಮೃತಬಳ್ಳಿ. ಆಡುಸೋಗೆ,ಜೇಷ್ಠ ಮಧು ಈ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕಷಾಯ ತಯಾರಿಸಿ ಕುಡಿಯಬೇಕು
★ ಮೂಲವ್ಯಾಧಿ : ತೊಂದರೆಯಿಂದ ಬಳಲುವವರು ಅಮೃತಬಳ್ಳಿಯಿಂದ ತಯಾರಿಸಿದ ತುಂಬಳಿಯನ್ನು ಪ್ರತಿದಿನ ಆಹಾರದಲ್ಲಿ ಬಳಸುವುದು ಉತ್ತಮ.
★ ಮೊಡವೆಗಳಿಗೆ: ಅಮೃತಬಳ್ಳಿಯ ಎಲೆ ಅಥವಾ ಕಾಂಡದ ರಸವನ್ನು ಪ್ರತಿದಿನ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಲೇಪಿಸಿಕೊಂಡು ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೊಡವೆಗಳು ಮಾಯುತ್ತವಲ್ಲದೆ ಮುಖದ ಕಾಂತಿಯು ಹೆಚ್ಚುತ್ತದೆ.
★ನಿಶ್ಯಕ್ತಿಯುಳ್ಳವರು : ನಾಲ್ಕು ಚಮಚೆ ಮೃತಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಪ್ರತಿದಿನ ಎರಡು ಬಾರಿ ಸೇವನೆ ಮಾಡುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.ಇದು ಶಕ್ತಿವರ್ಧಕ ಟಾನಿಕ್ ನಂತೆ ಕೆಲಸ ಮಾಡುತ್ತದೆ.
★ಪಿತ್ತದ ಗಂಧೆಗಳು: ಅಲರ್ಜಿಯಿಂದ ಮೈಮೇಲೆ ಪಿತ್ತದ ಗಂಧೆಗಳಾಗಿದ್ದಲ್ಲಿ ಅಮೃತಬಳ್ಳಿಯ ಎಲೆ, ಸಾಸಿವೆ ಮತ್ತು ಶ್ರೀಗಂಧದ ಚಕ್ಕೆ ಅರೆದು ಲೇಪಿಸಿಕೊಂಡಲ್ಲಿ ಉರಿ, ನಾವೆ ಕಡಿಮೆಯಾಗುತ್ತದೆ.
★ಚೇಳು ಕಚ್ಚಿದಾಗ :ಮೃತಬಳ್ಳಿಯ ಕಾಂಡದ ರಸವನ್ನು ಕಚ್ಚಿದ ಸ್ಥಳಕ್ಕೆ ಲೇಪಿಸುವುದಲ್ಲದೆ ಎರಡರಿಂದ ನಾಲ್ಕು ಚಮಚದಷ್ಟು ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.