ಮನೆ ಅಪರಾಧ ತಂಗಿಯನ್ನು ಪ್ರೀತಿಸಿದ ಯುವಕನಿಗೆ ಚಾಕು ಇರಿದ ಅಣ್ಣ

ತಂಗಿಯನ್ನು ಪ್ರೀತಿಸಿದ ಯುವಕನಿಗೆ ಚಾಕು ಇರಿದ ಅಣ್ಣ

0

ಗದಗ, ಅ.08: ತಂಗಿಯ ಜೊತೆ ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣ ಪ್ರೀತಿ ಮಾಡಿದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಗದಗ ನಗರದ ಧೋಬಿ ಘಾಟ್ ಬಳಿ ಅ. 6 ರಂದು ತಡ ರಾತ್ರಿ ನಡೆದಿದೆ.

Join Our Whatsapp Group

 ಧಾರವಾಡ ಮೂಲದ ಜಾಫರ್ ಜಮಾದಾರ ಎಂಬ 25 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿಯಲಾಗಿತ್ತು.

ತೀವ್ರವಾಗಿ ಗಾಯಗೊಂಡ ಜಾಫರ್ ನನ್ನು ರಾತ್ರೋರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಕರೆಸಿ ಬುದ್ಧಿ ಹೇಳಲಾಗಿತ್ತು. ವಾರ್ನಿಂಗ್ ಕೊಟ್ಟಿದ್ದರು ಜಾಫರ್ ಪ್ರೀತಿ ಕಡಿಮೆಯಾಗಿರಲಿಲ್ಲ. ಪ್ರೇಮ ಮುಂದುವರೆದಿತ್ತು. ಇದರಿಂದ ರೊಚ್ಚಿಗೆದ್ದ ರುಹಾನ್ ತನ್ನ ತಂಗಿಯ ಪ್ರಿಯತಮನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಪ್ರಮುಖ ಆರೋಪಿ ರುಹಾನ್ ಎಸ್ಕೇಪ್ ಆಗಿದ್ದು, 2ನೇ ಆರೋಪಿ ದಾದಾಪೀರ್​ ನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.