ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರಂತೆ “ನನಗೆ ಅಮೆರಿಕದಲ್ಲಿ ಒಳ್ಳೆಯ ಹೆಸರು ಬಂದರೆ, ತಕ್ಷಣ ಭಾರತದಲ್ಲಿ ನನ್ನ ಬಗ್ಗೆ ಅಪಪ್ರಚಾರಗಳು ಪ್ರಾರಂಭವಾಗಿ ಬಿಡುತ್ತದೆ. ಅವನು ಸರಿ ಇಲ್ಲ ಎಂದು ಹೇಳಲು ನನ್ನ ಜನಗಳು ಉತ್ಸುಕರಾಗಿರುತ್ತಾರೆ. ಈ ಪ್ರವೃತ್ತಿಯು ದಾಸ್ಯ ಮನೋಭಾವದ ಲಕ್ಷಣವಾಗಿದೆ ಯಾಕೆಂದರೆ ಗುಲಾಮರಾದ ಮನಸ್ಸಿನಲ್ಲಿ ಮಾತ್ಸರ್ಯ ತುಂಬಿ ತುಳು ಕಾಡುತ್ತಿರುತ್ತದೆ ಆದ್ದರಿಂದ ನೀವೆಲ್ಲರೂ ಮೊದಲು ಸ್ವತಂತ್ರರಾಗಿರಿ.”
ವಿವೇಕಾನಂದರ ಈ ವಿಚಾರವು ಈಗಲೂ ಪ್ರಸ್ತುತವಾಗಿದೆ. ಏನಾದರೂ ಒಂದು ಕೆಲಸ ಮಾಡಿದ ತಕ್ಷಣ “ಅದೆಲ್ಲ ಸರಿ, ಆದರೆ ಅವನು ಅಥವಾ ಅವಳು ಹೀಗೆ ಅಂತೆ ಎಂದು ಅವರ ಸಾಧನೆಯನ್ನು ಮರೆಗೆ ತಳ್ಳುವ ಹೇಳಿಕೆಗಳು, ಪಿಸು ಮಾತುಗಳು ಶುರುವಾಗಿಬಿಡುತ್ತದೆ. ಇನ್ನೊಬ್ಬರಿಗೆ ಆಗುವ ತೊಂದರೆಯಿಂದ ನಮಗೆ ಸುಖ ಸಂತೋಷ ಅನುಭವ ಉಂಟಾಗುವುದಕ್ಕೂ ನಮ್ಮಲ್ಲಿರುವ ಈ ಮನೋಪ್ರವೃತ್ತಿಯ ಕಾರಣವಾಗಿರುತ್ತದೆ
ಈ ರೀತಿಯ ಮನೋಭಾವವು ಮತ್ಸಾರ್ಯದಿಂದಲೇ ಸೃಷ್ಟಿಯಾಗುತ್ತದೆ. ಯಾಕೆಂದರೆ ಅವನ ಅಥವಾ ಅವಳ ಸಾಧನೆಯನ್ನು ಮರೆಗೆ ತರಲು ಮತ್ಸಾರ್ಯವು ನಮ್ಮಲ್ಲಿ ಪ್ರೇರಿಸುತ್ತದೆ. ಇನ್ನೊಬ್ಬರು ಏನನ್ನಾದರೂ ಸಾಧಿಸಿದಾಗ ಅದು ಈ ರೀತಿಯಲ್ಲಿ ಯಾಕೆ ನನ್ನನ್ನು ಪ್ರೇರಿಸಬೇಕು. ಅದು ನಮ್ಮನ್ನು ಕೂಡ ನಮ್ಮದೇ ರೀತಿಯಲ್ಲಿ ಸಾಧನೆಯನ್ನು ಮಾಡಲು ಏಕೆ ಕ್ರೀಡಾಶೀಲಗೊಳಿಸಬಾರದು ಎನ್ನುವ ಪ್ರಶ್ನೆ.
ಅದಕ್ಕೆ ಉತ್ತರ “ದಾಸ್ಯದ ಮನೋಭಾವ”. ದಾಸ್ಯದ ಮನೋಭಾವವು ಇನ್ನೊಬ್ಬರು ಮಾಡಿದ ಹಾಗೆ ಮಾಡಲು ಕಲ್ಪಿಸುತ್ತದೆ. ಹೊರತು ಸ್ವತಂತ್ರವಾಗಿ ಯೋಚಿಸಿ ಕ್ರಿಯಾಶೀಲರಾಗಲು ಕಲಿಸುವುದಿಲ್ಲ. ಇದೇ ದಾಸದ ಮನೋವೃತ್ತಿಯು ನಮ್ಮೆಲ್ಲರ ಶಕ್ತಿಯನ್ನು ಮುಂದೆ ಚಲಿಸಿದಂತೆ ಬೀಗ ಆಗಿ ಹಿಡಿದಿಟ್ಟುಬಿಟ್ಟಿರುತ್ತದೆ. ಶಕ್ತಿ ಚಾಲನೆ ಆಗದಿದ್ದರೆ ನಿಷ್ಕ್ರಿಯತೆ ತೀರ ಸಹಜವಾಗಿರುತ್ತದೆ. ಇದು ಸರಿಯಾಗಿ ಅರ್ಥ ಆಗಬೇಕಾದರೆ ಯಾವುದಾದರೂ ಒಂದು ಭಾಷಣಕಾರನೊಂದಿಗೆ ಒಳಪಂದವನ್ನು ಮಾಡಿಕೊಳ್ಳಿ, ಸಭೆಯಲ್ಲಿ ಕುಳಿತವರಿಗೆ ಒಂದು ಹಂತದಲ್ಲಿ ಚೆನ್ನಾಗಿ ಬಯಲು ಭಾಷಣಕಾರನಿಗೆ ಹೇಳಿ. ಭಾಷಣಕಾರ ಸಭೆಯಲ್ಲಿದ್ದವರಿಗೆ ಬೈಯುವ ಸಂದರ್ಭದಲ್ಲಿ ಸರಿಯಾಗಿ ನೀವು ಗಟ್ಟಿಯಾಗಿ ಎರಡು ಚಪ್ಪಾಳೆ ಕೊಡಿ. ತಕ್ಷಣ ಇಡೀ ಸಭೆಯ ಚಪ್ಪಳೆ ಹೊಡೆಯುತ್ತಿರುವುದನ್ನು ನೀವೇ ಗಮನಿಸುವಿರಿ.
ಹಾಗಿದ್ದರೆ, ಅವರು ಭಾಷಣಕಾರ ಭಾಷಣವನ್ನು ಕೇಳಿ ಅರ್ಥ ಮಾಡಿಕೊಂಡು ಚಪ್ಪಾಳೆಯ ಕ್ರಿಯೆಯನ್ನು ಮಾಡಿದ್ದಾರೆಂದು ಅರ್ಥವೋ, ನೀವು ಮಾಡಿದ ಹಾಗೆ ಮಾಡಿ ಚಪ್ಪಾಳೆ ಹೊಡೆದಿದ್ದಾರೆಂದು ಅರ್ಥವೋ, ವ್ಯಕ್ತಿಯ ಕ್ರಿಯಾಶೀಲತೆಯನ್ನು ದಾಸ್ಯವು ಕಟ್ಟಿ ಹಾಕಿದಾಗ ಎಲ್ಲಾ ವ್ಯಕ್ತಿಗಳ ನಡುವಳಿಕೆಯು ಹೀಗೆ ಇರುತ್ತದೆ ಅವರು ಏನನ್ನು ಮಾಡಲಾರರು ಯಾರೇ ಮಾಡಿದರು ಆಕ್ಷೇಪವನ್ನು ಮಾತ್ರ ಮಾಡಬಲ್ಲರು ನಿಮ್ಮಲ್ಲಿ ಇಂತಹ ಪ್ರವೃತ್ತಿ ಇದ್ದರೆ ದಯವಿಟ್ಟು ದಾಸ್ಯ ಮನೋವೃತ್ತಿಯ ಕಟ್ಟುಗಳನ್ನು ಸ್ವತಂತ್ರರಾಗಿರಿ.














