ಮನೆ ಜ್ಯೋತಿಷ್ಯ ಕೃಷ್ಣಪಕ್ಷದ ಚತುರ್ದಶಿ ತಿಥಿಯ ಬಲ

ಕೃಷ್ಣಪಕ್ಷದ ಚತುರ್ದಶಿ ತಿಥಿಯ ಬಲ

0

ಈ ತಿಥಿಯಲ್ಲಿ ಅರು ಭಾಗ ಮಾಡಲು ೧ ನೇ ಭಾಗದಲ್ಲಿ ಶಿಶು ಜನಿಸಿದರೆ ಶುಭವು ೨ ನೇ ಭಾಗದಲ್ಲಿ ಜನಿಸಿದರೆ ತಂದೆಗೆ ಕೇಡು. ೩ ನೇ ಭಾಗದಲ್ಲಿ ಜನಿಸಿದರೆ ತಾಯಿಗೆ ಕೇಡು, ೪ ನೇ ಭಾಗದಲ್ಲಿ ಜನಿಸಿದರೆ ಸೋದರ ಮಾವನಿಗೆ ಕೇಡು, ೫ ನೇ ಭಾಗದಲ್ಲಿ ಜನಿಸಿದರೆ ವಂಶಕ್ಕೆ ಕೆಡಕು. 6ನೇ ಭಾಗದಲ್ಲಿ ಜನಿಸಿದರೆ ಧನನಾಶವು ಈ ಪ್ರಕಾರವಾಗಿ ಅನಿಷ್ಟ ಫಲಗಳೇ ಉಂಟಾಗುವುದರಿಂದ ಈ ಜನನ ದೋಷ ನಿರ್ವಣರ್ಥವಾಗಿ ಶ್ರೀ ರುದ್ರಾಯ, ಶಿವ ಸಹಸ್ರ, ಜಪ, ವಿಷ್ಣು, ಸಹಸ್ರ ಜಪ,  ವರದಶಂಕರ ವೃತ ಇತ್ಯಾದಿಗಳನ್ನು ಪೂಜ್ಯರಿಂದ ಮಾಡಿಸಿ ಗೋದಾನ ಅನ್ನದಾನ ಮಾಡಬೇಕು.

Join Our Whatsapp Group

     ಪೌರ್ಣಿಮೆ (ಹುಣ್ಣಿಮೆ) : ತಿಥಿಯಲ್ಲಿ ಜನಿಸಿದಾತನು ಅತ್ಯಂತ ಸುಂದರ ಕಾಯನೂ,

ಬಲಿಷ್ಟನೂ, ದಯಾಶೀಲನೂ ಆಗುತ್ತಾನೆ. ನ್ಯಾಯ ಮಾರ್ಗದಿಂದಲೇ ಮಾತ್ರ ಹಣ- ಗುಣ ಬೆಳೆಸಿಕೊಳ್ಳುವನು. ವಿಶೇಷವಾಗಿ ಸ್ತ್ರೀಯರಿಂದೊಡಗೂಡಿ ಇರುವನು. ಸದಾ ಹರ್ಷಿತನಾಗಿರಲು ಪ್ರಯತ್ನಿಸುವನು. ದಯಾಶೀಲನೂ, ಪರೋಪಕಾರಿಯೂ ಆಗಿದ್ದು, ದಾನ-ಧರ್ಮ-ಪುಣ್ಯ ಗುಣಗಳಿಂದ ಶೋಭಿಸತಕ್ಕವನೂ, ಜನರಲ್ಲಿ ಮನ್ನಣೆ-ಅಭಿಮಾನ ವುಳ್ಳವನೂ ಆಗಿರುತ್ತಾನೆ. ಅಕಸ್ಮಾತ್ ಸ್ತ್ರೀ ಧನ ಹೊಂದಿ ಸುಖಿಯಾಗಿರುವನು. ಗುರು- ಹಿರಿಯರಲ್ಲಿ ಒಳ್ಳೇ ಭಕ್ತಿಯುಳ್ಳವನೂ, ಹೆಂಡತಿ-ಮಕ್ಕಳು, ಬಂಧು-ಬಾಂದವರೊಂದಿಗಿದ್ದು ಸದಾ ಸೌಖ್ಯ ಜೀವನ ನಡೆಸುವ ಪುಣ್ಯಾತ್ಮನೇ ಇವನು.

     ಅಮವಾಸ್ಯೆ: ತಿಥಿಯಲ್ಲಿ ಜನಿಸಿದವನು ಕಷ್ಟಜೀವಿಯಾಗಿ ಬಾಳುವನು ದುಷ್ಟ ಕಾರ್ಯಾಸಕ್ತನೂ, ಜನರ ವಿರೋಧವನ್ನು ಕಟ್ಟಿಕೊಳ್ಳುವವನೂ, ತುಂಟ ಗುಣದವನೂ, ಮೂರ್ಖನೂ ಆಗುವನು. ಆದರೆ ಜಾತಕಾಭರಣ ಎಂಬ ಗ್ರಂಥದಲ್ಲಿ ಈ ಅಮವಾಸ್ಯೆ ತಿಥಿಯಲ್ಲಿ ಹುಟ್ಟಿದವನು ಶಾಂತಚಿತ್ತನಾದ ಈತನು ಮಾತಾ-ಪಿತೃಗಳಲ್ಲಿ ಭಯ-ಭಕ್ತಿಯುಳ್ಳವನು. ರಾಜಯೋಗವುಳ್ಳ ಈತನು ಸಂಪತ್ತು ಸಮೃದ್ಧಿಯನ್ನು ಹೊಂದಿದವನು. ಜನರಿಂದ ಮನ್ನಣೆ ಗಳಿಸುವನು, ಆದರೆ ಅಶಕ್ತ ದೇಹವುಳ್ಳವನು, ಕೀರ್ತಿಹೀನನೂ, ಕಷ್ಟದಿಂದ ಕಾಲಹರಣ ಮಾಡುವವನೂ ಆಗುತ್ತಾನೆಂದು ಹೇಳಲಾಗಿದೆ. ಅಂತೂ, ಶುಭಾಶುಭ ಮಿಶ್ರಫಲಗಳನ್ನು ನಾವಿಲ್ಲಿ ಕಾಣುತ್ತೇವೆ. ಈ ಅಮವಾಸ್ಯೆಯ ದಿನ ಶಿಶುವು ಜನಿಸುವದರಿಂದ ಮನೆತನದ ಯಜಮಾನನ ಆಯುಷ್ಯ ನಾಶವೂ, ಧನ ನಾಶವೂ ಆಗುವದಲ್ಲದೇ, ಒಂದಿಲ್ಲೊಂದು ರೀತಿಯಿಂದ ಮನೆತನಕ್ಕೆ ಹಾನಿಯಾಗುತ್ತಲೇ ಇರುತ್ತದೆ. ಕಾರಣ. ದೋಷ ನಿವಾರಣಾರ್ಥಕ್ಕಾಗಿ ಗೋಮುಖ ಪ್ರಸವ ಶಾಂತಿಯನ್ನು ಪೂಜ್ಯ ಗುರುಗಳಿಂದ ಅವಶ್ಯವಾಗಿ ಮಾಡಿಸಬೇಕು. ಗುರು-ಹಿರಿಯರಿಂದ ಆಶೀರ್ವಾದ ಪಡೆಯಬೇಕು.

 ಜನನಕ್ಕೆ ವಾರಗಳ ಫಲವು

೧. ರವಿವಾರ ಈ ದಿನ ಜನಿಸಿದಾತನು ಶೂರನೂ, ಧೈರ್ಯಶಾಲಿಯೂ, ವಿಶೇಷವಾಗಿ ಚಿತ್ರಕಲೆಯನ್ನು ಬಲ್ಲವನೂ, ದಾನಶೂರನೂ, ಸ್ವಾತಂತ್ರ್ಯ ಪ್ರೇಮಿಯೂ ಆಗಿದ್ದರೂ,ಯಾವದೊಂದು ರೋಗದಿಂದ ಸದಾ ಬಳಲುವವನೂ ಆಗಿರುತ್ತಾನೆ. ಜನರಲ್ಲಿ ಪ್ರತಿಷ್ಟಿತನಾಗಿದ್ದರೂ ಸ್ತ್ರೀ ವಿಷಯದಲ್ಲಿ ಲಂಪಟನೂ, ಸ್ವಲ್ಪು ಕಂದು ಮಿಶ್ರಿತ ಕೆಂಪು ವರ್ಣದ ದೇಹವುಳ್ಳವನಾಗುತ್ತಾನೆ.

೨. ಸೋಮವಾರ ಜನಿಸಿದವನು ಚತುರನೂ, ಶಾಂತ ಸ್ವಭಾವದವನೂ, ಎಲ್ಲರಿಗೂ ಬೇಕಾದವನೂ, ಒಳ್ಳೆ ಮಾತುಕತೆಗಳನ್ನಾಡುದವನೂ, ಸದಾ ಶ್ರೀಮಂತ ಸುಖಗಳನ್ನು ಭೋಗಿಸುವವನೂ, ಸತತೋದ್ಯೋಗಿಯೂ, ಆಡಳಿತಗಾರರಲ್ಲಿ ಸ್ನೇಹ-ಪ್ರೇಮ ಗಳುಳ್ಳವನೂ, ಸುಖ-ದುಃಖಗಳನ್ನು ಸಮನಾಗಿ ಅನುಭವಿಸುವವನೂ ಆಗುತ್ತಾನೆ. ಗಾಯನ ವಾದನ ಕಲೆಗಳಲ್ಲಿ ಅಭಿರುಚಿಯುಳ್ಳವನೂ ಆಗುವನು.

೩. ಮಂಗಳವಾರ ಜನಿಸಿದವನು ಸದಾ ಜಗಳ ಕಾಯುವವನೂ, ಸದಾ ಅವಸರದಲ್ಲಿ ಕಾರ್ಯ ಮಾಡುವವನೂ ಬಲವಂತನೂ, ಧೈರ್ಯವಂತನೂ ಆಗಿರುವನು. ದೊಡ್ಡ ಸಾಹಸಿಯೆಂದು ಪ್ರಸಿದ್ಧನಾಗಿದ್ದರೂ ಕ್ರೂರ ಸ್ವಭಾವದವನು. ಮುಂಗೋಪಿಯು ದಯವಿಲ್ಲದವನು. ಯಾವ ಕಾರಣದಿಂದಲಾದರೂ ಜಗಳದಲ್ಲಿ-ವಾದ ವಿವಾದದಲ್ಲಿ ಜಯ

೪. ಬುಧವಾರ ದಿನ ಜನಿಸಿದವನು ಯಾವಾಗಲೂ ಒಳ್ಳೇ ಮಾತುಗಳನ್ನು ಆಡುವವನೂ, ಸುಂದರ ದೇಹದಾರ್ಢವುಳ್ಳವನೂ, ಶ್ರೀಮಂತನೂ, ವ್ಯಾಪಾರ- ವ್ಯವಹಾರಗಳಲ್ಲಿ ನಿಪುಣನೂ ಆಗುವನು ತನ್ನ ಚತುರತನವನ್ನು ಉಪಯೋಗಿಸಿ ಮನ್ನಣೆ ಗಳಿಸುವವನೂ, ಲಲಿತ ಕಲೆಗಳಲ್ಲಿ ಅಭಿರುಚಿಯುಳ್ಳವನೂ, ಸಮಾಧಾನ ಚಿತ್ರವುಳ್ಳವನೂ, ವಿದ್ಯಾವಂತನೂ, ದಾನ-ಧರ್ಮಾದಿಗಳಲ್ಲಿ ಅಭಿರುಚಿಯುಳ್ಳವನೂ, ಗುರು- ಹಿರಿಯರಲ್ಲಿ ಭಯ-ಭಕ್ತಿಯುಳ್ಳವನಾಗುವನು.

೫. ಗುರುವಾರ ದಿನ ಜನಿಸಿದವನು ವಿದ್ವಾಂಸನೂ ಧನವಂತನೂ, ಒಳ್ಳೇ ಗುಣವಂತನೂ, ಸರ್ವ ಜನರಲ್ಲಿ ಮನ್ನಣೆ ಗಳಿಸುವವನೂ ಆಗುತ್ತಾನೆ. ಅಪಾರ ಸ್ನೇಹಿತರ ಪ್ರೇಮವನ್ನು ಗಳಿಸಿದ ಈತನು ಆಚಾರವಂತನೂ, ಸ್ವಧರ್ಮದಲ್ಲಿ ಅಭಿಮಾನವುಳ್ಳವನೂ, ದಾನ-ಧರ್ಮಗಳಲ್ಲಿ ಮನಸಾ ತೊಡಗಿರುವವನೂ, ತಂದೆ-ತಾಯಿ ಗುರು-ಹಿರಿಯರಲ್ಲಿ ಭಯ-ಭಕ್ತಿಯನ್ನುಳ್ಳಾತನೂ, ತಿಳುವಳಿಕೆಯುಳ್ಳವನೂ ಆಗುತ್ತಾನೆ.

೬ ಶುಕ್ರವಾರ ದಿನ ಜನಿಸಿದವನು ಸನ್ಮಾರ್ಗದಲ್ಲಿ ನಡೆದು ಹೆಚ್ಚು ಜನರ ಪ್ರೀತಿಯನ್ನು ಗಳಿಸುವನು. ಗುರು-ಹಿರಿಯರಲ್ಲಿ ನಮ್ರನಾಗಿ ನಡೆದು ಮನ್ನಣೆ ಹೊಂದುವನು. ವಿಶೇಷ ಬಂಧು-ಮಿತ್ರರನ್ನು ಹೊಂದಿ, ಸಂತೋಷದ ಜೀವನ ಸಾಗಿಸುವನು. ಆರೋಗ್ಯವಂತನೂ, ನಿರ್ಮಲನೂ, ಸುಗಂಧ ಪುಷ್ಪ-ಗಂಧಾದಿಗಳನ್ನು ಧರಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತನೂ ಆಗಿದ್ದರೂ ಈತನು ಚಂಚಲ ಮನಸ್ಸಿನವನೂ ಆಗುವನು.

೭. ಶನಿವಾರ ದಿನ ಜನಿಸಿದವನು ಸೋಮಾರಿಯೂ, ಪರರ ದ್ರವ್ಯ-ಆಸ್ತಿ ಪಾಸ್ತಿಗಳಿಗೆ ಆಶೆ ಮಾಡುತ್ತ ಕಾಲಹರಣ ಮಾಡುವವನೂ ದುರ್ಮಾರ್ಗದಲ್ಲಿ ನಡೆಯುತ್ತ ಕ್ರೂರ ಸ್ವಭಾದವನಾಗಿ, ಆರೋಗ್ಯಹೀನನಾಗಿ ದುಃಖವನ್ನು ಅನುಭವಿಸುವನು