ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕುರಿತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನೀಡಿದ ಹೇಳಿಕೆಗೆ ಭಾರತದ ತೀವ್ರ ಆಕ್ರೋಶ ವ್ಯಕತಪಡಿಸಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆ ಸಮಾವೇಶದಲ್ಲಿ ತಮ್ಮ ಭಾಷಣದ ವೇಳೆ ವಾಂಗ್ ಯಿ ಅವರು, ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಕಾಶ್ಮೀರ ವಿಚಾರದಲ್ಲಿ ನಾವು ಅನೇಕ ಇಸ್ಲಾಮಿಕ್ ಸ್ನೇಹಿತರ ಕರೆಯನ್ನು ಮತ್ತೆ ಕೇಳಿದ್ದೇವೆ. ಚೀನಾ ಕೂಡ ಇದೇ ಆಕಾಂಕ್ಷೆಯನ್ನು ಹಂಚಿಕೊಳ್ಳುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಕಾಶ್ಮೀರ ‘ವಿವಾದ’ ಶಾಂತಿಯುತವಾಗಿ ಮತ್ತು ಸಮರ್ಪಕವಾಗಿ ಬಗೆಹರಿಯಬೇಕು ಎಂದು ಹೇಳಿದ್ದರು.
ಚೀನಾ ಸಚಿವರ ಈ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಸಂಗತಿ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ. ಚೀನಾ ಸೇರಿದಂತೆ ಇತರೆ ಯಾವುದೇ ದೇಶಗಳಿಗೆ ಹೇಳಿಕೆ ನೀಡಲು ಅಧಿಕಾರವಿಲ್ಲ. ಅವರ ಆಂತರಿಕ ವಿಚಾರಗಳಿಂದ ಸಾರ್ವಜನಿಕ ತೀರ್ಪು ನೀಡುವುದರಿಂದ ಭಾರತ ದೂರವೇ ಉಳಿದಿದೆ ಎಂಬುದನ್ನು ಅವರು ಗಮನಿಸಬೇಕು” ಎಂದು ಹೇಳಿದ್ದಾರೆ.