ಮನೆ ಸ್ಥಳೀಯ ಸೆ.21ಕ್ಕೆ ಮುಖ್ಯಮಂತ್ರಿಗಳಿಂದ ಪತ್ರಿಕಾ ದಿನಾಚರಣೆ ಉದ್ಘಾಟನೆ

ಸೆ.21ಕ್ಕೆ ಮುಖ್ಯಮಂತ್ರಿಗಳಿಂದ ಪತ್ರಿಕಾ ದಿನಾಚರಣೆ ಉದ್ಘಾಟನೆ

ಅರು ಮಂದಿ ಹಿರಿಯ ಪತ್ರಕರ್ತರಿಗೆ ಅಭಿನಂದನೆ: ಐವರು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

0

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸೆ. 21ಕ್ಕೆ (ಶನಿವಾರ) ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದ್ದು ಸಮಾರಂಭವನ್ನು  ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

Join Our Whatsapp Group

ಮೈಸೂರು ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ ಹಿರಿಯ ಪತ್ರಕರ್ತರಿಗೆ ಅಭಿನಂದನೆ  ಸಲ್ಲಿಸಲಿದ್ದಾರೆ. ವಾರ್ಷಿಕ ಪ್ರಶಸ್ತಿಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಢಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಪ್ರದಾನ ಮಾಡಲಿದ್ದಾರೆ.

ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಐನಕೈ ಅವರು ಪ್ರಧಾನ ಭಾಷಣ ಮಾಡಲಿದ್ದು ಶಾಸಕರಾದ ಶ್ರೀ ಕೆ. ಹರೀಶ್ ಗೌಡ, ಶ್ರೀ ಡಿ. ರವಿಶಂಕರ್, ನ್ಯೂಸ್ ಫಸ್ಟ್ ಕನ್ನಡ  ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ  ಎಸ್. ರವಿಕುಮಾರ್, ಜಿಎಸ್ಎಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶ್ರೀಹರಿ ದ್ವಾರಕನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ವಹಿಸಲಿದ್ದಾರೆ.

ಅಭಿನಂದಿತರು ಮತ್ತು ಪ್ರಶಸ್ತಿ ವಿಜೇತರು :

ಈ ಸಾಲಿನ ಹಿರಿಯ ನಗರ ಪತ್ರಕರ್ತರಾಗಿ ದಿನತಂತಿ ಪತ್ರಿಕೆಯ ಹಿರಿಯ ವರದಿಗಾರ ಶ್ರೀ ಎಂ.ಎನ್. ಕಿರಣ್ ಕುಮಾರ್, ಗ್ರಾಮಾಂತರ ಹಿರಿಯ ಪತ್ರಕರ್ತರಾದ ಪ್ರಜಾವಾಣಿ ದಿನಪತ್ರಿಕೆಯ ಶ್ರೀ ಯಶವಂತ ಸಾಲಿಗ್ರಾಮ,  ಹಿರಿಯ ಸುದ್ಧಿ ಸಂಪಾದಕರಾದ ಶ್ರೀ ಕೆ.ಎನ್. ನಾಗಸುಂದ್ರಪ್ಪ ( ವರ್ತಮಾನ ದಿನಪತ್ರಿಕೆ ),  ಹಿರಿಯ ಛಾಯಾಗ್ರಾಹಕರಾದ ಶ್ರೀ ಶ್ರೀರಾಮ್ (ದಿ. ಹಿಂದು ದಿನಪತ್ರಿಕೆ), ದೃಶ್ಯ ಮಾಧ್ಯಮದಿಂದ ಶ್ರೀ ಮಹೇಶ್ ಶ್ರವಣ ಬೆಳಗೋಳ (ಈ ಟಿವಿ ಭಾರತ್ ಹಿರಿಯ ವರದಿಗಾರ ) ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಫರ್ ಶ್ರೀ ನಾಗೇಶ್. ಎಸ್ (ವಿಸ್ತಾರ ಟಿವಿ ) ಅವರನ್ನು ಇದೇ ವೇಳೆ ಅಭಿನಂದಿಸಲಾಗುವುದು.

ಇನ್ನು ಈ ಸಾಲಿನ ಉತ್ತಮ ಕನ್ನಡ ವರದಿಗೆ ಶ್ರೀ ಹೆಚ್.ಎಸ್ ಸಚೀತ್ (ಪ್ರಜಾವಾಣಿ ಪತ್ರಿಕೆ) ಇಂಗ್ಲೀಷ್ ವರದಿಗೆ ಶ್ರೀಮತಿ  ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ, ಡೆಕ್ಕನ್ ಹೆರಾಲ್ಡ್) ಉತ್ತಮ ಫೋಟೋಗ್ರ್ರಾಫಿಗೆ ಶ್ರೀ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್‌ ಪ್ರೆಸ್ಸ್ ಪತ್ರಿಕೆ) ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಶ್ರೀ ಜಯಂತ್ ಮತ್ತು ಶ್ರೀ ರಾಮು‌ (ದೂರದರ್ಶನ) ಅಯ್ಕೆಯಾಗಿದ್ದಾರೆ. ಇವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದು ಸಂಘದ ಎಲ್ಲ ಸದಸ್ಯರು ಭಾಗವಹಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮನವಿ ಮಾಡಿದ್ದಾರೆ.