ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ಭಾರತದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ-2’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಸುಕುಮಾರ್ ನಿರ್ದೇಶನದ ʼಪುಷ್ಪʼ ಸಿನಿಮಾದ ಸೀಕ್ವೆಲ್ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ. ಇದೀಗ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ʼಪುಷ್ಪ-2 ದಿ ರೂಲ್ʼ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಬಾಕ್ಸ್ ಆಫೀಸ್ ವಶಪಡಿಸಿಕೊಳ್ಳಲು ಪುಷ್ಪ ರಾಜ್ ಮತ್ತೆ ಬರುತ್ತಿದ್ದಾರೆ. ಡೇಟ್ ಮಾರ್ಕ್ ಮಾಡಿ ಇಟ್ಟುಕೊಳ್ಳಿ 2024 ರ ಆಗಸ್ಟ್ 15 ರಂದು ಸಿನಿಮಾ ರಿಲೀಸ್ ಆಗುತ್ತದೆಂದು ಟ್ವೀಟ್ ಮಾಡಿ ತಿಳಿಸಿದೆ.
ಈ ಸಿನಿಮಾದಲ್ಲಿ ಫಾಹದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ʼಪುಷ್ಪ-2ʼ ನಲ್ಲಿ ಫಾಹದ್ ಹಾಗೂ ಪುಷ್ಪ ಅವರ ಮುಖಾಮುಖಿ ಇರಲಿದೆ. ರಕ್ತ ಚಂದನದ ಸಾಗಾಟದ ಕಥೆಯನ್ನು ಚಿತ್ರ ಒಳಗೊಂಡಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನೆಗೆಟಿವ್ ರೋಲ್ ನಲ್ಲಿ ಡಾಲಿ ಧನಂಜಯ ಅವರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.














