ಮನೆ ಸುದ್ದಿ ಜಾಲ ಮಕ್ಕಳನ್ನು ಸಮಾಜದ ಮೇರುವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ಎಸ್ ಎ ರಾಮದಾಸ್

ಮಕ್ಕಳನ್ನು ಸಮಾಜದ ಮೇರುವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ಎಸ್ ಎ ರಾಮದಾಸ್

0

ಮೈಸೂರು(Mysuru): ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು, ಮಕ್ಕಳು ಬೆಳೆಯುವ ಸಣ್ಣ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಸಮಾಜದ ಮೇರು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಎಸ್. ಎ ರಾಮದಾಸ್ ತಿಳಿಸಿದರು.

ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್‌  ಶಾಲೆಯಲ್ಲಿ  ಫೆ.26ರಂದು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ  ಬ್ರಹ್ಮೀಬೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉಚಿತ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ವಿದ್ಯಾರಣ್ಯಪುರಂ ಕಛೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳನ್ನು, ಗುಣಾತ್ಮಕ ಶಿಕ್ಷಣದ ಸನ್ಮಾರ್ಗ, ತಮ್ಮ ಮಕ್ಕಳು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲ ಎಂಬುದನ್ನ ಅರಿತು ಪೋಷಕರು  ಪ್ರಥಮ ಹಂತದಲ್ಲೇ ಮಕ್ಕಳಿಗೆ ಪ್ರೋತ್ಸಾಹ ಆತ್ಮಸ್ಥೈರ್ಯ ತುಂಬಿ ಬೆಳೆಸಲು ಮಂದಾಗಬೇಕು, ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನದೇಗುಲದ ಪ್ರಮುಖ ಘಟ್ಟ ಎಂದರು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುವ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ನಂತರ ಕೆಎಂಪಿಕೆ ಟ್ರಸ್ಟ್ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ, ಮಹರ್ಷಿ ಶಾಲೆಯಲ್ಲಿ ಫೆಬ್ರವರಿ 26ರಂದು ನಡೆಯಲಿರುವ ಸಾಮೂಹಿಕ ಉಚಿತ ಅಕ್ಷರಾಭ್ಯಾಸ  ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರು ಭಾಗವಹಿಸಬಹುದು. 2ವರ್ಷದಿಂದ 4ವರ್ಷದ ಮಕ್ಕಳು ಅವರ ಪೋಷಕರೊಡನೆ ಅಕ್ಷರಾಭ್ಯಾಸದಲ್ಲಿ ಭಾಗವಹಿಸಲು 9880752727, 7829067769  ಸಂಪರ್ಕಿಸಬಹುದು, ನಮ್ಮ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಒದಗಿಸಲಾಗುವುದು ಎಂದರು

ಇದೇ ಸಂಧರ್ಭದಲ್ಲಿ ಮಹರ್ಷಿ ಪಬ್ಲಿಕ್ ಶಾಲೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತೇಜಸ್ ಶಂಕರ್, ಬಿಜೆಪಿ ಮುಖಂಡರಾದ ಎ. ಸಂತೋಷ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ, ಪ್ರದೀಪ್ ಇದ್ದರು.