ಮನೆ ಅಪರಾಧ ಆಟೋಗೆ ಇನ್ನೋವಾ ಡಿಕ್ಕಿ: ಬಾಲಕ ಸಾವು, ಹಲವರಿಗೆ ಗಾಯ

ಆಟೋಗೆ ಇನ್ನೋವಾ ಡಿಕ್ಕಿ: ಬಾಲಕ ಸಾವು, ಹಲವರಿಗೆ ಗಾಯ

0

ಪಾವಗಡ: ತಾಲೂಕಿನ ಟಿ.ಎನ್. ಪೇಟ್ ಬಳಿ ಭಾನುವಾರ ರಾತ್ರಿ ಆಟೋಗೆ ಇನ್ನೋವಾ ಕಾರು ಢಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ (ಜ.16) ಬೆಳಿಗ್ಗೆ ಮೃತಪಟ್ಟಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಗೌರಿಪುರದ ಬಾಲಕ ವರ್ಷಿತ್ ರೆಡ್ಡಿ (13) ಮೃತಪಟ್ಟ ಬಾಲಕ.

ತಾಲೂಕಿನ ಟಿ.ಎನ್. ಪೇಟೆ ಗ್ರಾಮದ ಬಳಿ ಭಾನುವಾರ ರಾತ್ರಿ ರೊದ್ದಂ ನಿಂದ ಪಾವಗಡ ಕಡೆಗೆ ಬರುತ್ತಿದ್ದ ಕಾರು, ಪ್ರಯಾಣಿಕರನ್ನು ಇಳಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಢಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಸುಧಾ, ನಾರಾಯಣಮ್ಮ, ನಾರಾಯಣಪ್ಪ, ಭರತ್, ಜಶ್ವಂತ್ ಎಂಬವರಿಗೆ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್’ಗೆ ವಿನಾಶದ ಕನಸುಗಳು: ಸಿಎಂ ಬೊಮ್ಮಾಯಿ
ಮುಂದಿನ ಲೇಖನಜ. 25ರವರೆಗೆ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ