ಕಲಬುರಗಿ: ಕುಡಿದ ನಶೆಯಲ್ಲಿದ್ದ ಮಗ ಕ್ಷುಲ್ಲಕ ಕಾರಣಕ್ಕೆ ಕಟ್ಟಿಗೆಯಿಂದ ಹೊಡೆದು ತಾಯಿಯನ್ನೇ ಕೊಂದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ನಡೆದಿದೆ.
ಶೋಭಾ (45) ಕೊಲೆಯಾದ ತಾಯಿ.
ಅನೀಲ್ ಎಂಬಾತ ಕಟ್ಟಿಗೆಯಿಂದ ಹೊಡೆದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅನೀಲ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಕೊಂಚಾವರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.