ಮನೆ ಮನರಂಜನೆ “ಸರಾಯಾ” ಎಂದು ಪುತ್ರಿಗೆ ನಾಮಕರಣ ಮಾಡಿದ ತಾರಾಜೋಡಿ

“ಸರಾಯಾ” ಎಂದು ಪುತ್ರಿಗೆ ನಾಮಕರಣ ಮಾಡಿದ ತಾರಾಜೋಡಿ

0

ಬಾಲಿವುಡ್ ತಾರಾಜೋಡಿ ಕಿಯಾರಾ ಅಡ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ತಮ್ಮ ಪುತ್ರಿಯ ಹೆಸರನ್ನು ರಿವೀಲ್ ಮಾಡಿದ್ದಾರೆ. ಪುತ್ರಿಗೆ ʼಸರಾಯಾʼ ಎಂದು ಹೆಸರಿಟ್ಟಿದ್ದು, ಮಗಳ ಹೆಸರನ್ನು ಸ್ಟಾರ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ.

ಕಳೆದ ಜುಲೈ 16ರಂದು ಕಿಯಾರಾ ಹಾಗೂ ಸಿದ್ಧಾರ್ಥ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಇದುವರೆಗೂ ಮಗಳ ಮುಖವನ್ನು ಕ್ಯಾಮೆರಾ ಮುಂದೆ ತೋರಿಸಿಲ್ಲ. ತಮ್ಮ ಮಗಳಿಗೆ ಸಾಂಪ್ರದಾಯಿಕ ಹೆಸರನ್ನಿಟ್ಟು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾದ ಕಿಯಾರಾ ಸಿದ್ದಾಥ್ ಬಾಲಿವುಡ್‌ನ ಮೋಸ್ಟ್ ಸೆನ್ಸೇಷನಲ್ ಕಪಲ್. ಬಹುಬೇಡಿಯಲ್ಲಿದ್ದಾಗಲೇ ಕಿಯಾರಾ ಅಮ್ಮನಾಗಿದ್ದಾರೆ. ಇದೀಗ ನಟನೆಗೆ ಮಾತೃತ್ವದ ರಜೆಪಡೆದಿರುವ ಕಿಯಾರಾ ಕೆಲವೇ ತಿಂಗಳಲ್ಲಿ ಮತ್ತೆ ನಟನೆಗೆ ಮರಳುವ ಉತ್ಸಾಹದಲ್ಲಿದ್ದಾರೆ.