ಮನೆ ಸಾಹಿತ್ಯ ಅಂಗುಲಿ ಮಾಲನ ಕಥೆ

ಅಂಗುಲಿ ಮಾಲನ ಕಥೆ

0

      ಬುದ್ಧನ ಕಾಲದಲ್ಲಿ ಕೋಸಲ ನಗರದಲ್ಲಿ ಗರ್ಗು ಎಂಬ ಪಂಡಿತನಿದ್ದ. ಆತನಿಗೆ ಅಹಿಂಸಕನೆಂಬ  ಮಗನಿದ್ದ. ತನ್ನ ಮಗನಿಗೆ ಸಕಲ ಶಾಸ್ತ್ರಗಳನ್ನು ಕಲಿಸಬೇಕೆಂದು ಒಬ್ಬ ಗುರಿವಿನ ಬಳಿಗೆ ಕಳುಹಿಸಿದ. ಅಲ್ಲಿ ಅಹಿಂಸಕನು ಎಲ್ಲಾ ಶಾಸ್ತ್ರಗಳನ್ನು ಚೆನ್ನಾಗಿ ಕಲಿತುಕೊಂಡು ಉಳಿದೆಲ್ಲಾ ಶಿಷ್ಯರಿಗಿಂತ ಒಳ್ಳೆಯ ಹೆಸರನ್ನು ಪಡೆದುಕೊಂಡ. ಅದನ್ನು ಕಂಡು ಸಹಿಸಲಾಗದ ಕೆಲವು ಶಿಷ್ಯಂದಿರು ಅಹಿಂಸಕನ ಕುರಿತಂತೆ ಗುರುವಿನೊಂದಿಗೆ ಇಲ್ಲ ಸಲ್ಲದ್ದನ್ನೆಲ್ಲಾ ಹೇಳಿ ಅವನನ್ನು ಆಶ್ರಮದಿಂದ ಹೊರಹಾಕುವ ಹಾಗೆ ಮಾಡಿದರು.

Join Our Whatsapp Group

     ಆಶ್ರಮದಿಂದ ಮನೆಗೆ ಹಿಂತಿರುಗಿ ಬಂದ ಅಹಿಂಸಕನನ್ನು ನೋಡಿ ವಿಷಯವನ್ನು ತಿಳಿದುಕೊಂಡು ಕೋಪಾವೇಶಗಳಿಂದ ಅವನನ್ನು ಮನೆಯಿಂದಲೇ ಹೊರದಬಿದ್ದರು. ಆತನು ಹೇಳಲಿರುವ ವಿಷಯವನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೆ,ಯಾವುದೇ ಕಾರಣಕ್ಕೂ ಮನೆಬಾಗಿಲು ತುಳಿಯಕೂಡದು ಎಂದು ಖಾಡ ಖಂಡಿತವಾಗಿ ಹೇಳಿಯೇಬಿಟ್ಟರು. ಕೊನೆ ಪಕ್ಷ ಆಶ್ರಮಕ್ಕಾದರೂ ಹೋಗಿ ವಿವರಗಳನ್ನು ತಿಳಿದುಕೊಳ್ಳೋಣ ಎಂದು ಕೂಡಾ ಅವರಿಗೆ ಅನಿಸಲಿಲ್ಲ.

     ಆದರೆ,ಆ ತಾಯಿ ತಂದೆಯರು ಆ ರೀತಿಯಾಗಲ್ಲದೆ,ಬೇರೊಂದು ಬಗೆಯಲ್ಲಿ ಪ್ರವರ್ತಿಸಬೇಕಾಗಿತ್ತು, ಆದರೆ ತಪ್ಪು ಮಾಡಿದರು. ಅದು ಅಹಿಂಸಕನಿಗೆ ನಿರಾಸೆಯನ್ನುಂಟು ಮಾಡಿತು. ತಾಯಿ,ತಂದೆಯರ ಮೇಲೆ ಕೋಪ,ಗುರುವಿನ ಮೇಲೆ ದ್ವೇಷ,ಸಮಾಜದ ಬಗ್ಗೆ ಹಗೆತನ ಅವನಲ್ಲಿ ಬಲವಾಗಿ ಬೇರೂರಿತು.

    ಅಹಿಂಸಕನು ಮನೆ ತೊರೆದು ಕಾಡಿಗೆ ಹೋಗಿ ಚೆನ್ನಾಗಿ ಆಲೋಚಿಸಿದ ಈ ಸಮಾಜದಲ್ಲಿ ಒಳ್ಳೆಯವರಿಗೆ ಒಳ್ಳೆಯತನಕ್ಕೆ ಸ್ಥಾನವಿಲ್ಲವೆಂದುಕೊಂಡು ದರೋಡೆ, ಕಳ್ಳತನ,ಸುಲಿಗೆ ಮಾಡಬೇಕೆಂದು ನಿರ್ಧರಿಸಿಕೊಂಡನು. ಅಂದುಕೊಂಡದ್ದೇ ತಡ. ಕಾಡಿನ ಮಾರ್ಗದಲ್ಲಿ ಹೋಗುವ ದಾರಿಹೋಕರನ್ನು ತಡೆಗಟ್ಟಿ ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು. ಅವರ ಬೆರಳುಗಳನ್ನು ಮಾಲೆಯನ್ನಾಗಿ ಪೋಣಿಸಿಕೊಂಡು  ಕತ್ತಿಗೆ ಹಾಕಿಕೊಳ್ಳುತ್ತಿದ್ದರಿಂದ ಆತನ ಹೆಸರು ‘ಅಂಗುಳಿಮಾಲ’ ಎಂದು ಬದಲಾಯಿತು

     ಅವನನ್ನು ಈ ರೀತಿಯಾಗಿ ಬದಲಾಯಿಸಿದ್ದು ಯಾರು? ಅಹಿಂ ಸಕನೆಂದು ಹೆಸರು ಹೊಂದಿದ್ದ ವ್ಯಕ್ತಿ ಹಿಂಸೆಗೆ ಇಳಿಯಲು ಕಾರಣ ತಾಯಿ ತಂದೆಯರು ಎಂಬ ಸತ್ಯವನ್ನು ಎಲ್ಲರೂ ಗ್ರಹಿಸಬೇಕು.

     ಕೊನೆಯಲ್ಲಿ ಗೌತಮ ಬುದ್ಧನು ಅಂಗುಳಿಮಾಲನನ್ನು ಒಳ್ಳೆಯವನಾಗಿ ಬದಲಾಯಿಸಿ, ತಾಯಿ ತಂದೆಯರು, ಗುರುಗಳು ತಮ್ಮ ಕರ್ತವ್ಯಗಳನ್ನು ಬಹಳಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಬೋಧನೆಯನ್ನು ಮಾಡುತ್ತಾನೆ.

    ”ಮಕ್ಕಳೂ, ದೇವರು ನಿಜವಾಗಿಯೂ ಒಳ್ಳೆಯವರೆ. ಮೋಸ,ವಂಚನೆ,ಕಪಟಗಳ ನ್ನರಿಯದ ಕರುಣಾಮೂರ್ತಿಗಳು… ”ಎಂಬ ಮಾತುಗಳು  ಅಕ್ಷರಶಃ ಸತ್ಯ ಅವರು ಕ್ರಿಯೇಟಿವ್ ಜೀನಿಯಸ್ ಗಳಾಗಿ ಬದಲಾದರೂ ಅಪರಾಧಿಗಳಾಗಿ ಬದಲಾದರೂ ಆ ಜವಾಬ್ದಾರಿಯೇನಿದ್ದರೂ ಹೆತ್ತವರು!ಹಿರಿಯರಧದ್ದೆ! ನೀವೇನಂತೀರಾ…!?