ಮನೆ ರಾಜಕೀಯ ಭ್ರಷ್ಟಾಚಾರಿಗಳನ್ನು ವಾರೆಂಟ್ ಇಲ್ಲದೆ ಇ.ಡಿ ಬಂಧಿಸಬಹುದೆಂಬ ಸುಪ್ರೀಂ ತೀರ್ಪು ಕಾಂಗ್ರೆಸ್ಸಿಗರ ಎದೆ ನಡುಕ ಹೆಚ್ಚಿಸಿದೆ: ಬಿಜೆಪಿ

ಭ್ರಷ್ಟಾಚಾರಿಗಳನ್ನು ವಾರೆಂಟ್ ಇಲ್ಲದೆ ಇ.ಡಿ ಬಂಧಿಸಬಹುದೆಂಬ ಸುಪ್ರೀಂ ತೀರ್ಪು ಕಾಂಗ್ರೆಸ್ಸಿಗರ ಎದೆ ನಡುಕ ಹೆಚ್ಚಿಸಿದೆ: ಬಿಜೆಪಿ

0

ಬೆಂಗಳೂರು(Bengaluru): ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಭ್ರಷ್ಟಾಚಾರಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಾರಂಟ್‌ ಇಲ್ಲದೇ ಬಂಧಿಸಬಹುದಾಗಿದ್ದು, ಕಾಂಗ್ರೆಸ್ಸಿಗರಲ್ಲಿ ಎದೆ ನಡುಗಲಾರಂಭಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಭ್ರಷ್ಟಾಚಾರ ಹಾಗೂ ಇ.ಡಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನ ಖಾವೂಂಗಾ, ನ ಖಾನೆ ದೂಂಗಾ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಇನ್ನಷ್ಟು ಬಲ ಬಂದಂತಾಗಿದೆ ಎಂದು ಹೇಳಿದೆ.

ಇಂದಿರಾ ಗಾಂಧಿ ಚುನಾವಣೆ ಗೆದಿದ್ದು ಭ್ರಷ್ಟಾಚಾರದಿಂದಲ್ಲದೇ ಗಾಂಧಿವಾದದಿಂದಲ್ಲ. ಯಂಗ್ ಇಂಡಿಯಾ ಮೂಲಕ ನ್ಯಾಷನಲ್ ಹೆರಾಲ್ಡ್ ಎಂಬ ಬಹುಕೋಟಿ ಹಗರಣದ ಆಶ್ರಯದಾತೆ ಸೋನಿಯಾ. ಇಂಥ ಭ್ರಷ್ಟಾಚಾರಿಗಳ ಬಾಯಲ್ಲೂ ಭ್ರಷ್ಟಾಚಾರ ವಿರೋಧ ಬರುವಂತಾಗಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕು’ ಎಂದು ಬಿಜೆಪಿ ಲೇವಡಿ ಮಾಡಿದೆ.

ತಾನೇ ಚಾಣಕ್ಯ ಎಂಬ ಭ್ರಮೆಯಲ್ಲಿದ್ದ ಡಿ.ಕೆ.ಶಿವಕುಮಾರ್, ಜೈಲಿಗೆ ಹೋಗಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯಲ್ಲ. ಇದೇ ಭ್ರಷ್ಟಾಚಾರದಿಂದ. 20 ಬ್ಯಾಂಕಿನಲ್ಲಿ ₹200 ಕೋಟಿ ಹೂತಿಟಿದ್ದು, ಅವರ ಆದಾಯ 800 ಪಟ್ಟು ಹೆಚ್ಚಾಗಿರೋದು ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಬಗ್ಗೆ ಖುದ್ದು ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚಂದ! ಎಂದು ಕಿಡಿಕಾರಿದೆ.

ನಿಮ್ಮದೇ ಪಕ್ಷದ ಇನ್ನೊಬ್ಬ ಮಹಾಪುರುಷ ಎಂ.ಬಿ.ಪಾಟೀಲ ನೀರಾವರಿ ಸಚಿವರಾಗಿದ್ದಾಗ ಧಾರವಾಡದ ಜನರ ನೀರ ದಾಹದಲ್ಲೂ ದುಡ್ಡು ಹೊಡೆದರು. ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ₹400 ಕೋಟಿ ಲಪಟಾಯಿಸಿದ್ದು ಭ್ರಷ್ಚಾಚಾರ. ₹159 ಕೋಟಿ ನೀರಾವರಿ ಯೋಜನೆಗಳಿಗೆ ₹25 ಕೋಟಿ ಕಿಕ್ ಬ್ಯಾಕ್ ಪಡೆದಿದ್ದರಂತೆ. ಡಿಕೆಶಿ ಅವರೇ ಅದು ಭಷ್ಟಾಚಾರವಲ್ಲವೆ? ಎಂದು ಪ್ರಶ್ನಿಸಿದೆ.

ಹಿಂದಿನ ಲೇಖನಜ್ವರ ಮತ್ತು ಶೀತ ಕಡಿಮೆ ಮಾಡುವ ಮೂರು ಅತ್ಯದ್ಭುತ ಆಯುರ್ವೇದ ಪರಿಹಾರಗಳು
ಮುಂದಿನ ಲೇಖನ‘ಧರಣಿ ಮಂಡಲ ಮಧ್ಯದೊಳಗೆ’: ಸಿನಿಮಾ ವಿಮರ್ಶೆ