ಮನೆ ಕಾನೂನು ಸುಪ್ರೀಂ ತೀರ್ಪು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಗೆ ಹೊರತು, ದಂಧೆ ನಡೆಸುವವರಿಗಲ್ಲ: ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ

ಸುಪ್ರೀಂ ತೀರ್ಪು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಗೆ ಹೊರತು, ದಂಧೆ ನಡೆಸುವವರಿಗಲ್ಲ: ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ

0

ಮೈಸೂರು(Mysuru):  ವೇಶ್ಯಾವೃತ್ತಿ ಒಂದು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ  ತೀರ್ಪು ನೀಡದ್ದು,  ನ್ಯಾಯಾಲಯದ ತೀರ್ಪು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಗಾಗಿ ಇದೆಯೇ ಹೊರತು ದಂಧೆ ನಡೆಸುವವರಿಗಲ್ಲ ಎಂದು ಒಡನಾಡಿ ಸೇವಾಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ವೇಶ್ಯಾವೃತ್ತಿಯೇ ಬೇರೆ, ದಂಧೆಯೇ ಬೇರೆ. ಲೈಂಗಿಕ ವೃತ್ತಿಯನ್ನು ಒಂದು ದಂಧೆಯನ್ನಾಗಿ ಪರಿವರ್ತಿಸುವವರಿಗೆ ರಕ್ಷಣೆ ನೀಡುವುದಾಗಿ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿಲ್ಲ. ನ್ಯಾಯಾಲಯದ ತೀರ್ಪು ಹೊರತು ದಂಧೆ ನಡೆಸುವವರಿಗಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ವೇಶ್ಯಾವೃತ್ತಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಇಲಾಖೆ, ವಕೀಲರು, ಸಂಘ ಸಂಸ್ಥೆಗಳು ಹಾಗೂ ಇತರ ಭಾಗಿದಾರರು ಅರ್ಥ ಮಾಡಿಕೊಳ್ಳಬೇಕಿದೆ. ಇದನ್ನು ಸಮರ್ಪಕವಾದ ಕಾನೂನಿನ ಜ್ಞಾನದೊಡನೆ ಮನನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ವೇಶ್ಯಾವಾಟಿಕೆ ವಿರುದ್ದ ಕಾರ್ಯಾಚರಣೆ ನಡೆಸುವ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ, ಹಿಂಸಿಸುವಂತಿಲ್ಲ, ಸಂತ್ರಸ್ತೆಯಾಗಿಸುವಂತಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ನ್ಯಾಯಮೂರ್ತಿ ಎಲ್ ನಾಗೇಶ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿರುವ ತೀರ್ಪಿನಲ್ಲಿ ಹೇಳಲಾಗಿದೆ ಎಂದರು.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
ಮುಂದಿನ ಲೇಖನಅಪ್ರಾಪ್ತೆ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ